ಕಥೆಗಳ ಮೂಲಕ ಕನ್ನಡ ಕಲಿಯೋಣ.
Section 1: Kannada Story
ಚೂಟಿ ಸೋನಾ — Smart Sona

ಅಪ್ಪ ಸೋನಾಳಿಗೆ ಒಂದು ಮರದ ರೈಲು ನಿರ್ಮಿಸಲು ಶುರು ಮಾಡಿದರು. ''ನಾನೂ ಒಂದನ್ನು ಮಾಡುತ್ತೇನೆ," ಅಂದಳು ಸೋನಾ.
ಅಪ್ಪ ಮರವನ್ನು ಕೊಯ್ಯಲಾರಂಭಿಸಿದರು. ''ನಾನೂ ಕೆಲವನ್ನು ಕೊಯ್ಯುತ್ತೇನೆ," ಎನ್ನುತ್ತಾ ಸೋನಾ ತನ್ನ ಕೈಚಾಚಿದಳು. ''ಹಾಗೇ ಆಗಲಿ, ಆದರೆ ಮೊದಲು ನೀನು ಸೂಕ್ಷ್ಮವಾಗಿ ಗಮನಿಸಬೇಕು," ಎಂದರು ಅಪ್ಪ.
ನಂತರ, ಅಪ್ಪ ಚಕ್ರಗಳನ್ನು ಸೇರಿಸಲು ಶುರುಮಾಡಿದರು.
''ನಾನೂ ಮೊಳೆಗಳನ್ನು ಹೊಡೆಯುವೆ,'' ಎನ್ನುತ್ತಾ ಸೋನಾ ಸುತ್ತಿಗೆ ಎತ್ತಿಕೊಂಡಳು.
''ಹಾಗೇ ಆಗಲಿ, ಆದರೆ ಮೊದಲು ಗಮನಿಸು,'' ಎಂದರು ಅಪ್ಪ.
ಆ ಕೂಡಲೇ ರೈಲು ಸಿದ್ಧವಾಗಿತ್ತು. ಅಪ್ಪ ಅದಕ್ಕೊಂದು ದಾರ ಕಟ್ಟುವವರಿದ್ದರು.
''ಆದರೆ ನಾನು ಪೆನ್ಸಿಲ್ ಮತ್ತು ದಾರವನ್ನು ಎಲ್ಲಿ ಇಟ್ಟೆ?'' ಎಂದು ಅಪ್ಪ ಅವುಗಳನ್ನು ಹುಡುಕುತ್ತಾ ನಿಂತರು.
ಅಪ್ಪ ಈಗ ಪೇಚಾಡಿದರು. ಸೋನಾ ನಗಲು ಶುರುಮಾಡಿದಳು.
''ನಾನು ನಿಮಗೆ ಅವುಗಳನ್ನು ಹುಡುಕಿ ಕೊಡಲೇ?''
ಸೋನಾ, ಅಪ್ಪನ ಕಿವಿಯ ಹಿಂದಿನಿಂದ ಪೆನ್ಸಿಲ್ ತೆಗೆದಳು. ಮತ್ತೊಂದು ಕಿವಿಯ ಹಿಂದಿನಿಂದ ದಾರದುಂಡೆ ತೆಗೆದಳು. ''ನಾನು ನಿನ್ನನ್ನು ತುಂಬಾ ಚೆನ್ನಾಗಿ ಗಮನಿಸುತ್ತಿದ್ದೆ!'' ಸೋನಾ ತನ್ನ ತಂದೆಗೆ ಹೇಳಿದಳು.
''ನಿಜ! ನೀನು ನನಗೆ ತುಂಬ ಸಹಾಯ ಮಾಡಿದೆ, ಸೋನಾ,'' ಎಂದರು ಅಪ್ಪ, ಪ್ರೀತಿಯಿಂದ ಅವಳ ತಲೆತಟ್ಟುತ್ತಾ.
Section 2: Sentence-by-Sentence Translation
| # | Kannada (ಕನ್ನಡ) | English Translation |
|---|---|---|
| 1 | ಅಪ್ಪ ಸೋನಾಳಿಗೆ ಒಂದು ಮರದ ರೈಲು ನಿರ್ಮಿಸಲು ಶುರು ಮಾಡಿದರು. | Dad started making a wooden train for Sona. |
| 2 | ''ನಾನೂ ಒಂದನ್ನು ಮಾಡುತ್ತೇನೆ," ಅಂದಳು ಸೋನಾ. | “I’ll make one too,” Sona said. |
| 3 | ಅಪ್ಪ ಮರವನ್ನು ಕೊಯ್ಯಲಾರಂಭಿಸಿದರು. | Dad began cutting the wood. |
| 4 | ''ನಾನೂ ಕೆಲವನ್ನು ಕೊಯ್ಯುತ್ತೇನೆ," ಎನ್ನುತ್ತಾ ಸೋನಾ ತನ್ನ ಕೈಚಾಚಿದಳು. | “I’ll cut some too,” Sona said, stretching out her hand. |
| 5 | ''ಹಾಗೇ ಆಗಲಿ, ಆದರೆ ಮೊದಲು ನೀನು ಸೂಕ್ಷ್ಮವಾಗಿ ಗಮನಿಸಬೇಕು," ಎಂದರು ಅಪ್ಪ. | “All right, but first you need to watch closely,” Dad said. |
| 6 | ನಂತರ, ಅಪ್ಪ ಚಕ್ರಗಳನ್ನು ಸೇರಿಸಲು ಶುರುಮಾಡಿದರು. | Next, Dad started attaching the wheels. |
| 7 | ''ನಾನೂ ಮೊಳೆಗಳನ್ನು ಹೊಡೆಯುವೆ,'' ಎನ್ನುತ್ತಾ ಸೋನಾ ಸುತ್ತಿಗೆ ಎತ್ತಿಕೊಂಡಳು. | “I’ll hammer in some nails too,” Sona said, picking up the hammer. |
| 8 | ''ಹಾಗೇ ಆಗಲಿ, ಆದರೆ ಮೊದಲು ಗಮನಿಸು,'' ಎಂದರು ಅಪ್ಪ. | “All right, but watch first,” Dad said. |
| 9 | ಆ ಕೂಡಲೇ ರೈಲು ಸಿದ್ಧವಾಗಿತ್ತು. | Soon the train was ready. |
| 10 | ಅಪ್ಪ ಅದಕ್ಕೊಂದು ದಾರ ಕಟ್ಟುವವರಿದ್ದರು. | Dad was about to tie a string to it. |
| 11 | ''ಆದರೆ ನಾನು ಪೆನ್ಸಿಲ್ ಮತ್ತು ದಾರವನ್ನು ಎಲ್ಲಿ ಇಟ್ಟೆ?'' ಎಂದು ಅಪ್ಪ ಅವುಗಳನ್ನು ಹುಡುಕುತ್ತಾ ನಿಂತರು. | “But where did I put the pencil and the string?” Dad said as he stood looking for them. |
| 12 | ಅಪ್ಪ ಈಗ ಪೇಚಾಡಿದರು. | Now Dad was flustered. |
| 13 | ಸೋನಾ ನಗಲು ಶುರುಮಾಡಿದಳು. | Sona began to laugh. |
| 14 | ''ನಾನು ನಿಮಗೆ ಅವುಗಳನ್ನು ಹುಡುಕಿ ಕೊಡಲೇ?'' | “Shall I find them for you?” |
| 15 | ಸೋನಾ, ಅಪ್ಪನ ಕಿವಿಯ ಹಿಂದಿನಿಂದ ಪೆನ್ಸಿಲ್ ತೆಗೆದಳು. | Sona took the pencil from behind Dad’s ear. |
| 16 | ಮತ್ತೊಂದು ಕಿವಿಯ ಹಿಂದಿನಿಂದ ದಾರದುಂಡೆ ತೆಗೆದಳು. | She took a ball of string from behind his other ear. |
| 17 | ''ನಾನು ನಿನ್ನನ್ನು ತುಂಬಾ ಚೆನ್ನಾಗಿ ಗಮನಿಸುತ್ತಿದ್ದೆ!'' ಸೋನಾ ತನ್ನ ತಂದೆಗೆ ಹೇಳಿದಳು. | “I was watching you very carefully!” Sona told her father. |
| 18 | ''ನಿಜ! ನೀನು ನನಗೆ ತುಂಬ ಸಹಾಯ ಮಾಡಿದೆ, ಸೋನಾ,'' ಎಂದರು ಅಪ್ಪ, ಪ್ರೀತಿಯಿಂದ ಅವಳ ತಲೆತಟ್ಟುತ್ತಾ. | “That’s right! You helped me a lot, Sona,” Dad said, patting her head affectionately. |
Section 3: Vocabulary
ಕೆಲವು ಪದಗಳನ್ನು ಮೂಲರೂಪದಲ್ಲಿ ನೀಡಲಾಗಿದೆ. / Some words are shown in their base forms.
| Kannada (ಕನ್ನಡ) | Transliteration | Part of Speech | English Meaning |
|---|---|---|---|
| ಅಪ್ಪ | appa | noun | dad |
| ಮರ | mara | noun | wood in this story; also tree |
| ರೈಲು | railu | noun | train |
| ನಿರ್ಮಿಸು | nirmisu | verb | make; build |
| ಕೊಯ್ಯು | koyyu | verb | cut |
| ಮೊದಲು | modalu | adverb | first |
| ಗಮನಿಸು | gamanisu | verb | pay attention; watch |
| ಚಕ್ರ | chakra | noun | wheel |
| ಮೊಳೆ | mole | noun | nail |
| ಸುತ್ತಿಗೆ | suttige | noun | hammer |
| ದಾರ | daara | noun | string |
| ಎಲ್ಲಿ | elli | question word | where |
| ಹುಡುಕು | huduku | verb | look for |
| ಪೇಚಾಡು | pechaadu | verb | get flustered |
| ಕಿವಿ | kivi | noun | ear |
| ಸಹಾಯ | sahaaya | noun | help |
Source: ಚೂಟಿ ಸೋನಾ, written in Hindi by Vinita Krishna and translated into Kannada by A.S. Chandra Mouli, published by Pratham Books on StoryWeaver. Kannada text from the Global ASP edition, CC BY 4.0. English translation, Roman reading aid and learning notes by LangFastPro.




