ಕಥೆಗಳ ಮೂಲಕ ಕನ್ನಡ ಕಲಿಯೋಣ.
Section 1: Kannada Story
ಶಾಲೆಗೆ ಬಂದ ತರಕಾರಿಗಳು — The Vegetables Go to School

ರಾಜು ಎಂದಿನಂತೆ ಖುಷಿಯಾಗಿ ಶಾಲೆಗೆ ಹೊರಟಿದ್ದ. ದಾರಿಯಲ್ಲಿ ಎಂದೂ ನೋಡಿರದ ದೃಶ್ಯ ಕಂಡ. ಬ್ಯಾಗು ಹೆಗಲಿಗೆ ಏರಿಸಿಕೊಂಡು ಕೆಲವು ವಿಚಿತ್ರ ಆಕಾರಗಳು ಅವನಿಗಿಂತ ಮುಂದಾಗಿ ಹೊರಟಿದ್ದವು.
ಅವನು ಮಾರುಕಟ್ಟೆಯಲ್ಲಿ ನೋಡಿದ್ದ ತರಕಾರಿಗಳ ಹಾಗೆಯೇ ಅವು ಕಾಣಿಸುತ್ತಿದ್ದವು. ಅದನ್ನು ನೋಡಿ ಆತನಿಗೆ ಕುತೂಹಲ ತಡೆಯಲು ಆಗಲಿಲ್ಲ.
ಆ ಆಕಾರಗಳೆಲ್ಲ ದಷ್ಟಪುಷ್ಟವಾಗಿದ್ದವು. ಸೈನಿಕರ ಶಿಸ್ತಿನಲ್ಲಿ ಹೆಜ್ಜೆ ಹಾಕುತ್ತಿದ್ದವು.
ರಾಜು ಬೇಗಬೇಗನೆ ಹೆಜ್ಜೆ ಹಾಕಿದ. ಮುಂದೆ ಕಾಣುತ್ತಿದ್ದ ಅವುಗಳನ್ನು ಸಮೀಪಿಸಿ ನೋಡಬೇಕೆಂದು ಆತುರಗೊಂಡ.
ಕಡೆಗೂ ರಾಜು ಅವುಗಳನ್ನು ಸಮೀಪಿಸಿದ. ಅವುಗಳನ್ನೇ ದಿಟ್ಟಿಸಿ ನೋಡಿದ, ಅಚ್ಚರಿಯಾಯಿತು.
ಅವನು ಊಹಿಸಿದ್ದಂತೆಯೇ, ಅವು ಮಾರುಕಟ್ಟೆಯಲ್ಲಿ ಆತ ನೋಡಿದ್ದ ಬಗೆಬಗೆಯ ಗೆಡ್ಡೆಗಳು, ತರಕಾರಿಗಳೇ ಆಗಿದ್ದವು.
‘‘ಅರೆ! ನೀವಾ?’’ ಎಂಬ ಆಶ್ಚರ್ಯ ತುಂಬಿದ ಪ್ರಶ್ನೆ ಆತನ ಬಾಯಿಂದ ಬಂತು. ಅವು ಮಾತನಾಡಲಿಲ್ಲ. ತಮ್ಮತಮ್ಮಲ್ಲಿ ಪರಸ್ಪರ ಮುಖ ನೋಡಿಕೊಂಡವು. ಆನಂತರ ರಾಜುವಿನ ಕಡೆ ನೋಡಿ ಮುಗುಳುನಕ್ಕವು.
‘‘ಎಲ್ಲಿಗೆ ಹೊರಟಿದ್ದೀರಿ?’’ ಎಂದು ರಾಜು ಪ್ರಶ್ನಿಸಿದ. ‘‘ಇನ್ನೆಲ್ಲಿಗೆ? ನಿನ್ನ ಶಾಲೆಗೆ ಹೊರಟಿದ್ದೇವೆ,’’ ಎಂದವು ಅವೆಲ್ಲ. ಹಾಗೆ ಒಂದೇ ಧ್ವನಿಯಲ್ಲಿ ಹೇಳಿದಾಗ ಮೆಲ್ಲಗೆ ತಂಗಾಳಿ ಸೋಕಿದಂತಾಯಿತು. ರಾಜುವಿಗೆ ಹಿತವೆನಿಸಿತು. ಅವುಗಳೊಂದಿಗೆ ಮಾತನಾಡುತ್ತ ರಾಜು ಮುಂದುವರೆದ.
ಸ್ವಲ್ಪ ಹೊತ್ತಿನ ನಂತರ, ಏಕೋ ಹಿಂತಿರುಗಿ ನೋಡಿದ. ಇನ್ನಷ್ಟು ಅಚ್ಚರಿ ಅವನಿಗೆ ಕಾದಿತ್ತ್ತು. ಅವನ ಹಿಂದಿನಿಂದ ಎಲ್ಲಾ ಬಗೆಯ ಸೊಪ್ಪಿನ ತರಕಾರಿಗಳು ಸಾಲಾಗಿ ಹೆಗಲಿಗೆ ಶಾಲಾಬ್ಯಾಗ್ ಹಾಕಿಕೊಂಡು ಅಷ್ಟೇ ಶಿಸ್ತಿನಿಂದ ನಡೆದು ಬರುತ್ತಿದ್ದವು. ಮುಂದೆ ಗೆಡ್ಡೆ, ತರಕಾರಿಗಳ ಸಾಲು, ಹಿಂದೆ ಸೊಪ್ಪು ತರಕಾರಿಗಳ ಸಾಲು, ನಡುವೆ ನಮ್ಮ ರಾಜು ಕೂಡಾ ಸೇರಿದ.
ಅವನ ಖುಷಿಗೆ ಈಗ ಮಿತಿಯೇ ಇರಲಿಲ್ಲ. ಅವುಗಳ ಜೊತೆಗೆ ಶಾಲೆಗೆ ಹೊರಟನು.
ಶಾಲೆ ತಲುಪುತ್ತಿದ್ದಂತೇ ಅಲ್ಲಿದ್ದ ಎಲ್ಲರೂ, ತರಕಾರಿಗಳ ಜೊತೆಗೆ ಬಂದ ರಾಜುವನ್ನೇ ಕಣ್ಣು ಅರಳಿಸಿಕೊಂಡು ನೋಡ ತೊಡಗಿದರು.
ಟೀಚರ್ ಬಂದು ಖುಷಿಯಿಂದ,‘‘ಒಳ್ಳೆಯ ಹುಡುಗ,’’ ಎಂದು ಬೆನ್ನು ತಟ್ಟತೊಡಗಿದರು. ರಾಜುವಿಗೆ ಬಹಳ ಸಂಭ್ರಮವಾಯಿತು. ‘‘ಥ್ಯಾಂಕ್ಯೂ ಟೀಚರ್,’’ ಎಂದು ನಕ್ಕ. ಉಳಿದ ಮಕ್ಕಳೆಲ್ಲಾ ಸಂತೋಷದಿಂದ ನೋಡುತ್ತಿದ್ದರು.
ಇನ್ನು ಸ್ವಲ್ಪ ಜೋರಾಗಿ ಬೆನ್ನು ತಟ್ಟಿದಂತಾಗಿ ಕಣ್ಣು ಬಿಟ್ಟ. ‘‘ಶಾಲೆಗೆ ಹೊತ್ತಾಯಿತು ಏಳು,’’ ಎನ್ನುತ್ತ ಅಮ್ಮ ಬೆನ್ನಿನ ಮೇಲೆ ತಟ್ಟುತ್ತಿದ್ದಳು.
‘‘ಅರೆ! ಕನಸಾ,’’ ಎಂದು ಕಣ್ಣುಜ್ಜಿಕೊಳ್ಳುತ್ತ ಎದ್ದ. ಆದರೆ ರಾಜು ಗೆಲುವಾಗಿದ್ದ.
Section 2: Sentence-by-Sentence Translation
| # | Kannada (ಕನ್ನಡ) | English Translation |
|---|---|---|
| 1 | ರಾಜು ಎಂದಿನಂತೆ ಖುಷಿಯಾಗಿ ಶಾಲೆಗೆ ಹೊರಟಿದ್ದ. | Raju was happily on his way to school, as usual. |
| 2 | ದಾರಿಯಲ್ಲಿ ಎಂದೂ ನೋಡಿರದ ದೃಶ್ಯ ಕಂಡ. | On the way, he saw something he had never seen before. |
| 3 | ಬ್ಯಾಗು ಹೆಗಲಿಗೆ ಏರಿಸಿಕೊಂಡು ಕೆಲವು ವಿಚಿತ್ರ ಆಕಾರಗಳು ಅವನಿಗಿಂತ ಮುಂದಾಗಿ ಹೊರಟಿದ್ದವು. | Some strange shapes were walking ahead of him, carrying bags on their shoulders. |
| 4 | ಅವನು ಮಾರುಕಟ್ಟೆಯಲ್ಲಿ ನೋಡಿದ್ದ ತರಕಾರಿಗಳ ಹಾಗೆಯೇ ಅವು ಕಾಣಿಸುತ್ತಿದ್ದವು. | They looked just like the vegetables he had seen at the market. |
| 5 | ಅದನ್ನು ನೋಡಿ ಆತನಿಗೆ ಕುತೂಹಲ ತಡೆಯಲು ಆಗಲಿಲ್ಲ. | The sight made him terribly curious. |
| 6 | ಆ ಆಕಾರಗಳೆಲ್ಲ ದಷ್ಟಪುಷ್ಟವಾಗಿದ್ದವು. | All those shapes were plump and sturdy. |
| 7 | ಸೈನಿಕರ ಶಿಸ್ತಿನಲ್ಲಿ ಹೆಜ್ಜೆ ಹಾಕುತ್ತಿದ್ದವು. | They marched with the discipline of soldiers. |
| 8 | ರಾಜು ಬೇಗಬೇಗನೆ ಹೆಜ್ಜೆ ಹಾಕಿದ. | Raju quickened his steps. |
| 9 | ಮುಂದೆ ಕಾಣುತ್ತಿದ್ದ ಅವುಗಳನ್ನು ಸಮೀಪಿಸಿ ನೋಡಬೇಕೆಂದು ಆತುರಗೊಂಡ. | He was eager to get closer and see the shapes ahead of him. |
| 10 | ಕಡೆಗೂ ರಾಜು ಅವುಗಳನ್ನು ಸಮೀಪಿಸಿದ. | At last, Raju caught up with them. |
| 11 | ಅವುಗಳನ್ನೇ ದಿಟ್ಟಿಸಿ ನೋಡಿದ, ಅಚ್ಚರಿಯಾಯಿತು. | He stared at them in surprise. |
| 12 | ಅವನು ಊಹಿಸಿದ್ದಂತೆಯೇ, ಅವು ಮಾರುಕಟ್ಟೆಯಲ್ಲಿ ಆತ ನೋಡಿದ್ದ ಬಗೆಬಗೆಯ ಗೆಡ್ಡೆಗಳು, ತರಕಾರಿಗಳೇ ಆಗಿದ್ದವು. | Just as he had guessed, they were the different kinds of tubers and vegetables he had seen at the market. |
| 13 | ‘‘ಅರೆ! ನೀವಾ?’’ ಎಂಬ ಆಶ್ಚರ್ಯ ತುಂಬಿದ ಪ್ರಶ್ನೆ ಆತನ ಬಾಯಿಂದ ಬಂತು. | “Oh! Is it you?” he exclaimed in surprise. |
| 14 | ಅವು ಮಾತನಾಡಲಿಲ್ಲ. | They did not speak. |
| 15 | ತಮ್ಮತಮ್ಮಲ್ಲಿ ಪರಸ್ಪರ ಮುಖ ನೋಡಿಕೊಂಡವು. | They looked at one another. |
| 16 | ಆನಂತರ ರಾಜುವಿನ ಕಡೆ ನೋಡಿ ಮುಗುಳುನಕ್ಕವು. | Then they turned towards Raju and smiled. |
| 17 | ‘‘ಎಲ್ಲಿಗೆ ಹೊರಟಿದ್ದೀರಿ?’’ ಎಂದು ರಾಜು ಪ್ರಶ್ನಿಸಿದ. | “Where are you going?” Raju asked. |
| 18 | ‘‘ಇನ್ನೆಲ್ಲಿಗೆ? ನಿನ್ನ ಶಾಲೆಗೆ ಹೊರಟಿದ್ದೇವೆ,’’ ಎಂದವು ಅವೆಲ್ಲ. | “Where else? We are going to your school,” they all said. |
| 19 | ಹಾಗೆ ಒಂದೇ ಧ್ವನಿಯಲ್ಲಿ ಹೇಳಿದಾಗ ಮೆಲ್ಲಗೆ ತಂಗಾಳಿ ಸೋಕಿದಂತಾಯಿತು. | As they spoke together in one voice, it felt as though a gentle breeze had brushed past. |
| 20 | ರಾಜುವಿಗೆ ಹಿತವೆನಿಸಿತು. | Raju felt happy and comfortable. |
| 21 | ಅವುಗಳೊಂದಿಗೆ ಮಾತನಾಡುತ್ತ ರಾಜು ಮುಂದುವರೆದ. | He walked on, talking with them. |
| 22 | ಸ್ವಲ್ಪ ಹೊತ್ತಿನ ನಂತರ, ಏಕೋ ಹಿಂತಿರುಗಿ ನೋಡಿದ. | After a while, for some reason, he turned to look behind him. |
| 23 | ಇನ್ನಷ್ಟು ಅಚ್ಚರಿ ಅವನಿಗೆ ಕಾದಿತ್ತ್ತು. | Another surprise was waiting for him. |
| 24 | ಅವನ ಹಿಂದಿನಿಂದ ಎಲ್ಲಾ ಬಗೆಯ ಸೊಪ್ಪಿನ ತರಕಾರಿಗಳು ಸಾಲಾಗಿ ಹೆಗಲಿಗೆ ಶಾಲಾಬ್ಯಾಗ್ ಹಾಕಿಕೊಂಡು ಅಷ್ಟೇ ಶಿಸ್ತಿನಿಂದ ನಡೆದು ಬರುತ್ತಿದ್ದವು. | Behind him, all kinds of leafy vegetables were walking in a line with schoolbags on their shoulders, just as neatly and in step. |
| 25 | ಮುಂದೆ ಗೆಡ್ಡೆ, ತರಕಾರಿಗಳ ಸಾಲು, ಹಿಂದೆ ಸೊಪ್ಪು ತರಕಾರಿಗಳ ಸಾಲು, ನಡುವೆ ನಮ್ಮ ರಾಜು ಕೂಡಾ ಸೇರಿದ. | With a line of tubers and vegetables ahead and a line of leafy vegetables behind, our Raju joined them in the middle. |
| 26 | ಅವನ ಖುಷಿಗೆ ಈಗ ಮಿತಿಯೇ ಇರಲಿಲ್ಲ. | His happiness now knew no bounds. |
| 27 | ಅವುಗಳ ಜೊತೆಗೆ ಶಾಲೆಗೆ ಹೊರಟನು. | He set off for school with them. |
| 28 | ಶಾಲೆ ತಲುಪುತ್ತಿದ್ದಂತೇ ಅಲ್ಲಿದ್ದ ಎಲ್ಲರೂ, ತರಕಾರಿಗಳ ಜೊತೆಗೆ ಬಂದ ರಾಜುವನ್ನೇ ಕಣ್ಣು ಅರಳಿಸಿಕೊಂಡು ನೋಡ ತೊಡಗಿದರು. | When they reached school, everyone there stared wide-eyed at Raju, who had arrived with the vegetables. |
| 29 | ಟೀಚರ್ ಬಂದು ಖುಷಿಯಿಂದ,‘‘ಒಳ್ಳೆಯ ಹುಡುಗ,’’ ಎಂದು ಬೆನ್ನು ತಟ್ಟತೊಡಗಿದರು. | The teacher came over happily and began patting his back, saying, “Good boy!” |
| 30 | ರಾಜುವಿಗೆ ಬಹಳ ಸಂಭ್ರಮವಾಯಿತು. | Raju was delighted. |
| 31 | ‘‘ಥ್ಯಾಂಕ್ಯೂ ಟೀಚರ್,’’ ಎಂದು ನಕ್ಕ. | “Thank you, Teacher,” he said with a smile. |
| 32 | ಉಳಿದ ಮಕ್ಕಳೆಲ್ಲಾ ಸಂತೋಷದಿಂದ ನೋಡುತ್ತಿದ್ದರು. | All the other children watched happily. |
| 33 | ಇನ್ನು ಸ್ವಲ್ಪ ಜೋರಾಗಿ ಬೆನ್ನು ತಟ್ಟಿದಂತಾಗಿ ಕಣ್ಣು ಬಿಟ್ಟ. | He felt a slightly firmer pat on his back and opened his eyes. |
| 34 | ‘‘ಶಾಲೆಗೆ ಹೊತ್ತಾಯಿತು ಏಳು,’’ ಎನ್ನುತ್ತ ಅಮ್ಮ ಬೆನ್ನಿನ ಮೇಲೆ ತಟ್ಟುತ್ತಿದ್ದಳು. | His mother was patting his back, saying, “It is time for school. Get up!” |
| 35 | ‘‘ಅರೆ! ಕನಸಾ,’’ ಎಂದು ಕಣ್ಣುಜ್ಜಿಕೊಳ್ಳುತ್ತ ಎದ್ದ. | “Oh! Was it a dream?” he said, getting up and rubbing his eyes. |
| 36 | ಆದರೆ ರಾಜು ಗೆಲುವಾಗಿದ್ದ. | But Raju was still cheerful. |
Section 3: Vocabulary
ಕೆಲವು ಪದಗಳನ್ನು ಮೂಲರೂಪದಲ್ಲಿ ನೀಡಲಾಗಿದೆ. ಕೆಲವು ಪದಗಳು ಕಥೆಯಲ್ಲಿ ಪ್ರತ್ಯಯಗಳೊಂದಿಗೆ ಬರುತ್ತವೆ.
Some words are shown in their base form; they appear with endings in the story.
| Kannada (ಕನ್ನಡ) | Pronunciation | Part of Speech | English Meaning |
|---|---|---|---|
| ಶಾಲೆ | shaale | Noun | school |
| ತರಕಾರಿ | tarakaari | Noun | vegetable |
| ದಾರಿ | daari | Noun | path; way |
| ದೃಶ್ಯ | drushya | Noun | sight; scene |
| ಹೆಗಲು | hegalu | Noun | shoulder |
| ವಿಚಿತ್ರ | vichitra | Adjective | strange; unusual |
| ಆಕಾರ | aakaara | Noun | shape; form |
| ಮಾರುಕಟ್ಟೆ | maarukatte | Noun | market |
| ಕುತೂಹಲ | kutoohala | Noun | curiosity |
| ದಷ್ಟಪುಷ್ಟ | dashtapushta | Adjective | plump and sturdy |
| ಸೈನಿಕ | sainika | Noun | soldier |
| ಶಿಸ್ತು | shistu | Noun | discipline |
| ಹೆಜ್ಜೆ | hejje | Noun | step |
| ಆತುರ | aatura | Noun | eagerness; haste |
| ಗೆಡ್ಡೆ | gedde | Noun | tuber; underground edible stem or root |
| ಪ್ರಶ್ನೆ | prashne | Noun | question |
| ಮುಖ | mukha | Noun | face |
| ಧ್ವನಿ | dhvani | Noun | voice; sound |
| ತಂಗಾಳಿ | tangaali | Noun | gentle, cool breeze |
| ಸೊಪ್ಪು | soppu | Noun | leafy greens |
| ಸಾಲು | saalu | Noun | line; row |
| ಖುಷಿ | khushi | Noun | happiness |
| ಬೆನ್ನು | bennu | Noun | back |
| ಕನಸು | kanasu | Noun | dream |
Continue your Kannada learning journey with these related lessons:
Source: ಶಾಲೆಗೆ ಬಂದ ತರಕಾರಿಗಳು by Venkatramana Gowda (© Pratham Books, 2015), published by Pratham Books on StoryWeaver, CC BY 4.0. Print edition published in partnership with the Rajiv Gandhi Foundation. New English translation and learning notes by LangFastPro.




