ಕಥೆಗಳ ಮೂಲಕ ಕನ್ನಡ ಕಲಿಯೋಣ.
Section 1: Kannada Story
ಕೆಂಪು ರೈನ್‌ಕೋಟ್ — The Red Raincoat

ಒಂದು ಭಾನುವಾರ ಅಪ್ಪ, ಅಮ್ಮ ಮನುಗೆ ಮಳೆಗಾಲದ ಮೇಲಂಗಿ ಕೊಡಿಸಿದರು.
ಅದರ ಬಣ್ಣ ಕೆಂಪು. "ಅಮ್ಮಾ, ಇವತ್ತು ನಾನು ಹೊಸ ಮೇಲಂಗಿ ಹಾಕಿಕೊಳಲಾ?" ಎಂದು ಆತುರದಿಂದ ಕೇಳಿದ ಮನು.
"ಈಗ ಬೇಡ ಮನು, ಇವತ್ತೇನು ಮಳೆ ಬರುತಿಲ್ಲ. ಸ್ವಲ್ಪ ದಿನ ತಾಳು ಮಳೆಗಾಲ ಇನ್ನೇನು ಹತ್ತಿರದಲ್ಲೇ ಇದೆ," ಎಂದಳು ಅಮ್ಮ.
ಸೋಮವಾರ ಅಬ್ಬಬ್ಬಾ, ಅದೇನು ಬಿಸಿಲು. "ಅಮ್ಮಾ, ಇವತ್ತಾದರೂ ಮಳೆ ಬರುವುದಾ?" ಎಂದು ಕೇಳಿದ ಮನು. "ಇಲ್ಲ ಮನು, ಈ ಬಿಸಿಲಲ್ಲಿ ನೀನೇನಾದರೂ ಮೇಲಂಗಿ ಹಾಕಿದರೆ ನೋಡಿದವರು ನಗುತ್ತಾರೆ ಅಷ್ಟೆ," ಎಂದಳು ಅಮ್ಮ.
ಮಂಗಳವಾರವೂ ಆಕಾಶ ನೀಲಿ ಬಣ್ಣದಲ್ಲಿತ್ತು.
"ಅಮ್ಮಾ, ನಾನು ಮೇಲಂಗಿ ಹಾಕುವುದು ಯಾವಾಗ?" ಎಂದು ಬೇಸರದಿಂದ ಕೇಳಿದ ಮನು. "ಇದೊಂದು ದಿನ ನೋಡೋಣ ಕಂದ, ಅಗೋ ಮೇಲೆ ನೋಡಲ್ಲಿ ಒಂದೇ ಮೋಡವಿದೆ!" ಎಂದಳು ಅಮ್ಮ.
ಬುಧವಾರವೋ ಸುಡುಸುಡು ಧಗೆ.
"ಅಮ್ಮಾ, ಇನ್ನೂ ಯಾವಾಗ ಈ ಮಳೆ ಬರುವುದು?" ಎಂದು ಕೇಳಿದ ಮನು. "ಕಂದ, ಇನ್ನೇನು ಮಳೆ ಬಂದೇ ಬರುವುದು. ಮಧ್ಯಾಹ್ನಕ್ಕೂ ಮುಂಚೆಯೇ ಬಂದರೂ ಬರಬಹುದು," ಎಂದಳು ಅಮ್ಮ.
ಗುರುವಾರ ಮನು ಪಿಕ್ನಿಕ್ ಗೆ ಹೊರಟ.
"ಅಮ್ಮಾ, ಇವತ್ತು ಮಳೆ ಬಂದರೆ ಏನು ಮಾಡಲಿ? ಯಾವುದಕ್ಕೂ ಮೇಲಂಗಿ ಎತ್ತಿಟ್ಟುಕೊಳಲಾ?" ಎಂದು ಕೇಳಿದ ಮನು. "ಇಲ್ಲ ಮನು, ಇವತ್ತೇನು ಮಳೆ ಬರುವ ಹಾಗಿಲ್ಲ. ಮೇಲೆ ಅಲ್ಲಿಲ್ಲಿ ಸಣ್ಣ ಬಿಳಿ ಮೋಡಗಳಿವೆ ಅಷ್ಟೆ," ಎಂದಳು ಅಮ್ಮ.
ಶುಕ್ರವಾರ ಬಂತು, ಮೋಡ ಕವಿದಿತ್ತು.
"ಅಮ್ಮಾ, ಇವತ್ತು ಮಳೆ ಬರುವುದಾ?" ಎಂದು ಕೂಗಿ ಕೇಳಿದ ಮನು. "ಇವತ್ತು ಬರಬಹುದು ಕಣೋ, ಹತ್ತಿರದಲ್ಲೇ ಕಪ್ಪು ಮೋಡಗಳು ತೇಲುತಿವೆ," ಎಂದಳು ಅಮ್ಮ.
ಶನಿವಾರ ಅಬ್ಬರದ ಆರಂಭ.
ಧಡ್... ಧಡಾರ್! "ಅಮ್ಮಾ, ಅದು ಗುಡುಗಿನ ಸದ್ದು ತಾನೇ? ಈಗ ಮಳೆ ಬರುವುದು ಅಲ್ಲವಾ?" ಎಂದು ಕೇಳಿದ ಮನು.
ಅಂತೂ, ಮಳೆ ಬಂತು. "ಆಹಾ! ಮಳೆ ಬಂತು ಮಳೆ ಬಂತು," ಹಾಡಿದ ಮನು, ಹೊರಗೆ ಓಡುತ.
"ಅರೆ ಮನು, ನಿನ್ನ ಮಳೆಗಾಲದ ಮೇಲಂಗಿಯನೇ ಮರೆತೆಯಲ್ಲೋ!" ಎಂದು ಕೂಗಿದರು ಅಮ್ಮ.
Section 2: Sentence-by-Sentence Translation
| # | Kannada (ಕನ್ನಡ) | English Translation |
|---|---|---|
| 1 | ಒಂದು ಭಾನುವಾರ ಅಪ್ಪ, ಅಮ್ಮ ಮನುಗೆ ಮಳೆಗಾಲದ ಮೇಲಂಗಿ ಕೊಡಿಸಿದರು. | One Sunday, Mum and Dad bought Manu a raincoat. |
| 2 | ಅದರ ಬಣ್ಣ ಕೆಂಪು. | It was red. |
| 3 | "ಅಮ್ಮಾ, ಇವತ್ತು ನಾನು ಹೊಸ ಮೇಲಂಗಿ ಹಾಕಿಕೊಳಲಾ?" ಎಂದು ಆತುರದಿಂದ ಕೇಳಿದ ಮನು. | "Mum, can I wear my new raincoat today?" Manu asked eagerly. |
| 4 | "ಈಗ ಬೇಡ ಮನು, ಇವತ್ತೇನು ಮಳೆ ಬರುತಿಲ್ಲ. ಸ್ವಲ್ಪ ದಿನ ತಾಳು ಮಳೆಗಾಲ ಇನ್ನೇನು ಹತ್ತಿರದಲ್ಲೇ ಇದೆ," ಎಂದಳು ಅಮ್ಮ. | "Not now, Manu. It isn't raining today. Wait a few days; the rainy season is almost here," said Mum. |
| 5 | ಸೋಮವಾರ ಅಬ್ಬಬ್ಬಾ, ಅದೇನು ಬಿಸಿಲು. | On Monday, goodness, how the sun blazed! |
| 6 | "ಅಮ್ಮಾ, ಇವತ್ತಾದರೂ ಮಳೆ ಬರುವುದಾ?" ಎಂದು ಕೇಳಿದ ಮನು. | "Mum, will it rain at least today?" asked Manu. |
| 7 | "ಇಲ್ಲ ಮನು, ಈ ಬಿಸಿಲಲ್ಲಿ ನೀನೇನಾದರೂ ಮೇಲಂಗಿ ಹಾಕಿದರೆ ನೋಡಿದವರು ನಗುತ್ತಾರೆ ಅಷ್ಟೆ," ಎಂದಳು ಅಮ್ಮ. | "No, Manu. If you wear your raincoat in this sunshine, people will only laugh," said Mum. |
| 8 | ಮಂಗಳವಾರವೂ ಆಕಾಶ ನೀಲಿ ಬಣ್ಣದಲ್ಲಿತ್ತು. | On Tuesday, the sky was still blue. |
| 9 | "ಅಮ್ಮಾ, ನಾನು ಮೇಲಂಗಿ ಹಾಕುವುದು ಯಾವಾಗ?" ಎಂದು ಬೇಸರದಿಂದ ಕೇಳಿದ ಮನು. | "Mum, when can I wear my raincoat?" Manu asked sadly. |
| 10 | "ಇದೊಂದು ದಿನ ನೋಡೋಣ ಕಂದ, ಅಗೋ ಮೇಲೆ ನೋಡಲ್ಲಿ ಒಂದೇ ಮೋಡವಿದೆ!" ಎಂದಳು ಅಮ್ಮ. | "Let's wait one more day, dear. Look up there, there's only one cloud!" said Mum. |
| 11 | ಬುಧವಾರವೋ ಸುಡುಸುಡು ಧಗೆ. | Wednesday was scorching. |
| 12 | "ಅಮ್ಮಾ, ಇನ್ನೂ ಯಾವಾಗ ಈ ಮಳೆ ಬರುವುದು?" ಎಂದು ಕೇಳಿದ ಮನು. | "Mum, when will this rain finally come?" asked Manu. |
| 13 | "ಕಂದ, ಇನ್ನೇನು ಮಳೆ ಬಂದೇ ಬರುವುದು. ಮಧ್ಯಾಹ್ನಕ್ಕೂ ಮುಂಚೆಯೇ ಬಂದರೂ ಬರಬಹುದು," ಎಂದಳು ಅಮ್ಮ. | "Dear, the rain is sure to come soon. It might even come before noon," said Mum. |
| 14 | ಗುರುವಾರ ಮನು ಪಿಕ್ನಿಕ್ ಗೆ ಹೊರಟ. | On Thursday, Manu set off for a picnic. |
| 15 | "ಅಮ್ಮಾ, ಇವತ್ತು ಮಳೆ ಬಂದರೆ ಏನು ಮಾಡಲಿ? ಯಾವುದಕ್ಕೂ ಮೇಲಂಗಿ ಎತ್ತಿಟ್ಟುಕೊಳಲಾ?" ಎಂದು ಕೇಳಿದ ಮನು. | "Mum, what should I do if it rains today? Shall I pack my raincoat just in case?" asked Manu. |
| 16 | "ಇಲ್ಲ ಮನು, ಇವತ್ತೇನು ಮಳೆ ಬರುವ ಹಾಗಿಲ್ಲ. ಮೇಲೆ ಅಲ್ಲಿಲ್ಲಿ ಸಣ್ಣ ಬಿಳಿ ಮೋಡಗಳಿವೆ ಅಷ್ಟೆ," ಎಂದಳು ಅಮ್ಮ. | "No, Manu, it doesn't look as though it will rain today. There are only a few little white clouds here and there," said Mum. |
| 17 | ಶುಕ್ರವಾರ ಬಂತು, ಮೋಡ ಕವಿದಿತ್ತು. | Friday came, and the sky was cloudy. |
| 18 | "ಅಮ್ಮಾ, ಇವತ್ತು ಮಳೆ ಬರುವುದಾ?" ಎಂದು ಕೂಗಿ ಕೇಳಿದ ಮನು. | "Mum, will it rain today?" Manu called out. |
| 19 | "ಇವತ್ತು ಬರಬಹುದು ಕಣೋ, ಹತ್ತಿರದಲ್ಲೇ ಕಪ್ಪು ಮೋಡಗಳು ತೇಲುತಿವೆ," ಎಂದಳು ಅಮ್ಮ. | "It might today, dear. Dark clouds are floating nearby," said Mum. |
| 20 | ಶನಿವಾರ ಅಬ್ಬರದ ಆರಂಭ. | Saturday began with a rumble. |
| 21 | ಧಡ್... ಧಡಾರ್! "ಅಮ್ಮಾ, ಅದು ಗುಡುಗಿನ ಸದ್ದು ತಾನೇ? ಈಗ ಮಳೆ ಬರುವುದು ಅಲ್ಲವಾ?" ಎಂದು ಕೇಳಿದ ಮನು. | Boom... crash! "Mum, that's thunder, isn't it? It will rain now, won't it?" asked Manu. |
| 22 | ಅಂತೂ, ಮಳೆ ಬಂತು. | At last, it rained. |
| 23 | "ಆಹಾ! ಮಳೆ ಬಂತು ಮಳೆ ಬಂತು," ಹಾಡಿದ ಮನು, ಹೊರಗೆ ಓಡುತ. | "Hooray! It's raining, it's raining!" Manu sang as he ran outside. |
| 24 | "ಅರೆ ಮನು, ನಿನ್ನ ಮಳೆಗಾಲದ ಮೇಲಂಗಿಯನೇ ಮರೆತೆಯಲ್ಲೋ!" ಎಂದು ಕೂಗಿದರು ಅಮ್ಮ. | "Oh, Manu, you've forgotten your raincoat!" Mum called out. |
Section 3: Vocabulary
ಕೆಲವು ಪದಗಳನ್ನು ಮೂಲರೂಪದಲ್ಲಿ ನೀಡಲಾಗಿದೆ. ಕೆಲವು ಪದಗಳು ಕಥೆಯಲ್ಲಿ ಪ್ರತ್ಯಯಗಳೊಂದಿಗೆ ಬರುತ್ತವೆ.
Some words are shown in their base form; they appear with endings in the story.
| Kannada (ಕನ್ನಡ) | Pronunciation | Part of Speech | English Meaning |
|---|---|---|---|
| ಭಾನುವಾರ | bhaanuvaara | Noun | Sunday |
| ಸೋಮವಾರ | somavaara | Noun | Monday |
| ಮಂಗಳವಾರ | mangalavaara | Noun | Tuesday |
| ಬುಧವಾರ | budhavaara | Noun | Wednesday |
| ಗುರುವಾರ | guruvaara | Noun | Thursday |
| ಶುಕ್ರವಾರ | shukravaara | Noun | Friday |
| ಶನಿವಾರ | shanivaara | Noun | Saturday |
| ಅಪ್ಪ | appa | Noun | Dad; father |
| ಅಮ್ಮ | amma | Noun | Mum; mother |
| ಮೇಲಂಗಿ | melangi | Noun | outer garment; raincoat in this story |
| ಕೆಂಪು | kempu | Adjective | red |
| ಹೊಸ | hosa | Adjective | new |
| ಇವತ್ತು | ivattu | Adverb | today |
| ಬಿಸಿಲು | bisilu | Noun | sunshine; heat of the sun |
| ಆಕಾಶ | aakaasha | Noun | sky |
| ನೀಲಿ | neeli | Adjective | blue |
| ಮೋಡ | moda | Noun | cloud |
| ಮಳೆ | male | Noun | rain |
| ಕಂದ | kanda | Noun | child; dear one |
| ಧಗೆ | dhage | Noun | intense heat |
| ಬಿಳಿ | bili | Adjective | white |
| ಕಪ್ಪು | kappu | Adjective | black; dark |
| ಸದ್ದು | saddu | Noun | sound; noise |
| ಹೊರಗೆ | horage | Adverb | outside |
Continue your Kannada learning journey with these related lessons:
Source: ಕೆಂಪು ರೈನ್‌ಕೋಟ್, Kannada translation by Ravikiran of The Red Raincoat by Kiran Kasturia (original and translation © Pratham Books, 2015), on StoryWeaver, CC BY 4.0. Developed in a Pratham Books workshop; print edition supported by HDFC Asset Management Company Limited, a joint venture with Standard Life Investments. New English translation and learning notes by LangFastPro.




