ಕಾಗೆ ಬಳಗವ ಕರೆಯಿತು — The Crow Called Its Friends

LangFastPro Editorial Team's avatar
Lesson prepared byLangFastPro Editorial Team
More

ಕಥೆಗಳ ಮೂಲಕ ಕನ್ನಡ ಕಲಿಯೋಣ.

Section 1: Kannada Story

ಕಾಗೆ ಬಳಗವ ಕರೆಯಿತು — The Crow Called Its Friends

A crow and a cuckoo sit in a leafy tree while other crows gather nearby.

Listen to the story0:00 / 0:00

ಎಂದಿನಂತೆ ಬೆಳಗಾಯಿತು. ಕಾಗೆ ತನ್ನ ಗೂಡಿನಲ್ಲಿ ಸುಮ್ಮನೆ ಕೂತಿತ್ತು. ಒಂದೆರಡು ಸಲ, "ಕಾಂವ್... ಕಾಂವ್..." ಅಂತು. ಆಮೇಲೆ ಅದೂ ಬೇಸರವಾಗಿ ಸುಮ್ಮನೆ ಕೂತಿತು. ಆ ಸಮಯಕ್ಕೆ ಸರಿಯಾಗಿ, "ಕುಹೂ... ಕುಹೂ..." ಕೋಗಿಲೆಯ ಇಂಪಾದ ಕೂಗು ಕೇಳಿಬಂತು.

ಕೋಗಿಲೆ ಕೂಗು ಕೇಳಿ ಕಾಗೆಗೆ ಹಿತವೆನ್ನಿಸಿತು. ಸ್ವಲ್ಪ ಸಿಟ್ಟೂ ಬಂತು. ತಾನೇ ಕಾವು ಕೊಟ್ಟು ಹುಟ್ಟಿಸಿದ ಕೋಗಿಲೆ ತನ್ನನ್ನು ಮೀರಿಸುವಂತೆ ಹಾಡುತ್ತಿದೆಯಲ್ಲ ಅಂತಾ ಅಸೂಯೆಯಾಯಿತು. ಏನಾದರೂ ಆಗಲಿ, ಕೋಗಿಲೆಯ ಹಾಗೆಯೇ ಹಾಡಲು ಕಲಿಯಬೇಕು ಅಂತಾ ನಿರ್ಧರಿಸಿತು. ಕೋಗಿಲೆಯ ಬಗ್ಗೆ ಅಸೂಯೆ ಪಡುವುದಕ್ಕಿಂತ, ಅದರ ಹತ್ತಿರವೇ ಹಾಡಲು ಕಲಿತರೆ ಒಳ್ಳೆಯದಲ್ಲವೇ ಎಂದುಕೊಂಡಿತು.

ಹಾಗೆಂದು ನಿರ್ಧರಿಸಿದ ಕಾಗೆ, ಕೋಗಿಲೆಯನ್ನು ಹುಡುಕಿಕೊಂಡು ಹೋಯಿತು. ಕಾಗೆಯನ್ನು ಕೋಗಿಲೆ ಸ್ವಲ್ಪ ಅನುಮಾನದಿಂದಲೇ ನೋಡಿತು. ಆದರೆ ಕಾಗೆ ತುಂಬಾ ಗೌರವದಿಂದ ಕೋಗಿಲೆಯನ್ನು ಮಾತನಾಡಿಸಿತು. "ನನಗೆ ಹಾಡಲು ಕಲಿಸ್ತೀಯಾ?" ಅಂತಾ ಕೇಳಿತು. ಕೋಗಿಲೆ ಒಪ್ಪಿತು. "ಆದರೆ ಬೆಳಿಗ್ಗೆ ಬೇಗ ಎದ್ದು ಬರಬೇಕು," ಎಂದು ಷರತ್ತು ಹಾಕಿತು. ಕಾಗೆ, "ಸರಿ," "ಸರಿ," "ಸರಿ," ಎಂದಿತು.ಮಾರನೇ ದಿನದಿಂದಲೇ ಪಾಠ ಕಲಿಸುವಿಕೆ ನಿರ್ಧಾರವಾಯಿತು.

ಕಾಗೆಗೆ ದಿನಾ ತಡವಾಗಿ ಏಳುವ ಅಭ್ಯಾಸ. ಆದರೆ ನಾಳೆ ಹಾಗೆ ಮಾಡುವಂತಿರಲಿಲ್ಲ. ಅದಕ್ಕಾಗಿ ಎಚ್ಚರಗಂಟೆ ಇಟ್ಟುಕೊಂಡು ಮಲಗಿತು. ಎಚ್ಚರಗಂಟೆ ಹೊಡೆದುಕೊಂಡ ಕೂಡಲೇ ಕಾಗೆಗೆ ಎಚ್ಚರವಾಯಿತು. ಬೇಗ ಬೇಗ ತಯಾರಾಗಿ ನಿದ್ದೆಗಣ್ಣಲ್ಲೇ ಕೋಗಿಲೆಯ ಹತ್ತಿರ ಹೋಯಿತು.

ಕೋಗಿಲೆ ಆಗಲೇ ತಯಾರಾಗಿ ಕುಳಿತಿತ್ತು. ಕಾಗೆ ಬಂದ ಕೂಡಲೇ ಸಂಗೀತ ಪಾಠ ಆರಂಭಿಸಿತು. ಕೋಗಿಲೆ ಎಷ್ಟು ಸಲ, ಕುಹೂ... ಕುಹೂ... ಎಂದರೂ ಕಾಗೆ ಮಾತ್ರ, ಕಾಂವ್... ಕಾಂವ್... ಎಂದೇ ಹೇಳುತ್ತಿತ್ತು. ಕೊನೆಗೊಮ್ಮೆ ಕೋಗಿಲೆಗೆ ಸಿಟ್ಟು ಬಂದುಬಿಟ್ಟಿತು. ನಿನಗೆ ಹಾಡಲು ಕಲಿಸುವುದು ನನ್ನಿಂದ ಸಾಧ್ಯವಿಲ್ಲ, ಎಂದು ಎದ್ದು ಹೋಗಿಬಿಟ್ಟಿತು.

ಕಾಗೆಗೆ ತುಂಬಾ ಬೇಸರವಾಯಿತು. ಸಪ್ಪೆ ಮೋರೆ ಹಾಕಿಕೊಂಡು ಮನೆಗೆ ಬಂತು.

ಆಮೇಲೆ ಸ್ವಲ್ಪ ದಿನಗಳು ಕಳೆದವು. ಒಂದು ದಿನ ಆಕಾಶದ ತುಂಬ ಮೋಡ. ಸಣ್ಣಗೆ ತಂಗಾಳಿ ಬೀಸಿ ಮಳೆ ಹನಿಯ ತೊಡಗಿತು. ಕಾಗೆ ಮನೆಯಲ್ಲೇ ಕೂತಿತ್ತು. ಆಗ ದೂರದಲ್ಲಿ ನವಿಲು ಗರಿ ಬಿಚ್ಚಿ ಕುಣಿಯುವುದು ಕಾಣಿಸಿತು. 'ಹಾಡು ಕಲಿಯಲು ಆಗಲಿಲ್ಲ, ನವಿಲಿನ ಬಳಿ ನೃತ್ಯವನ್ನಾದರೂ ಕಲಿಯಬೇಕು,' ಅಂತಾ ಕಾಗೆಗೆ ಅನ್ನಿಸಿತು.

ನವಿಲಿನ ಬಳಿ ಹೋಗಿ, "ಕುಣಿಯಲು ಕಲಿಸ್ತೀಯಾ?" ಎಂದು ಕೇಳಿತು. ನವಿಲು, "ಸರಿ!" ಎಂದಿತು. "ನನ್ನ ಹಾಗೆಯೇ ನರ್ತಿಸು," ಎಂದಿತು. ಕಾಗೆ ರೆಕ್ಕೆ ಬಿಚ್ಚಿ, ಹೆಜ್ಜೆ ಹಾಕಿತು.

ನವಿಲು, "ಹಾಗಲ್ಲ, ಹೀಗೆ," ಅಂತಾ ಮತ್ತೆ ಕುಣಿದು ತೋರಿಸಿತು. ಕಾಗೆ ಮತ್ತೆ ಹೆಜ್ಜೆ ಹಾಕಿತು. "ಹಾಗಲ್ಲ!" ಎಂದು ನವಿಲು ಮತ್ತೆ ಕುಣಿದು ತೋರಿಸಿತು. ಆಗಲೂ ಕಾಗೆ ತಪ್ಪಿತು. ಕಡೆಗೆ ನವಿಲು ಸಿಟ್ಟಿನಿಂದ, "ನಿನಗೆ ಕುಣಿಯಲು ಬರೋಲ್ಲ, ಹೋಗು," ಎಂದಿತು.

ಕಾಗೆಗೆ ಬೇಸರವಾಯಿತು. ಹಾಡಲು ಬರಲಿಲ್ಲ, ಕುಣಿಯಲು ಬರಲಿಲ್ಲ. ಚಂದಾಗಿ ಗೂಡು ಕಟ್ಟುವುದಕ್ಕಾದರೂ ಕಲಿಯಬೇಕು ಎನ್ನಿಸಿತು. ಗುಬ್ಬಿಯ ಹತ್ತಿರ ಹೋಯಿತು. "ನಿನ್ನ ಹಾಗೆಯೇ ಗೂಡು ಕಟ್ಟಲು ಕಲಿಸ್ತೀಯಾ?" ಎಂದು ಕೇಳಿತು. ಗುಬ್ಬಿ ಒಪ್ಪಲಿಲ್ಲ. "ನಿನಗೆ ನನ್ನ ಹಾಗೆ ಗೂಡು ಕಟ್ಟುವುದಕ್ಕೆ ಸಾಧ್ಯವೇ ಇಲ್ಲ, ಹೋಗು," ಎಂದುಬಿಟ್ಟಿತು.

ಕಾಗೆಗೆ ಮತ್ತೊಮ್ಮೆ ತುಂಬಾ ಅಪಮಾನವಾದಂತಾಯಿತು. ಮನೆಗೆ ಬಂತು. ಚಿಂತೆ ಮಾಡುತ್ತ ಕೂತಿತು. ಆಗ ಕೆಳಗಿನ ಮನೆಯ ಮುಸುರೆ ತೊಳೆಯುವ ಜಾಗದಲ್ಲಿ ಒಂದಿಷ್ಟು ಅನ್ನ ಬಿದ್ದಿರುವುದು ಕಾಣಿಸಿತು. ಅದನ್ನು ಕಂಡು ಅಲ್ಲಿಗೆ ಹೋಗಿ ಕುಳಿತು, "ಕಾಂವ್... ಕಾಂವ್..." ತನ್ನ ಬಳಗವನ್ನೆಲ್ಲ ಕರೆಯಿತು. ಅದರ ಬಳಗದವರೆಲ್ಲ ಬಂದರು. ಕಾಗೆ ಎಲ್ಲರಿಗೂ ಅನ್ನ ಹಂಚಿ ತಾನೂ ತಿಂದಿತು.

ಆಗ ಕಾಗೆಗೆ ಒಂದು ವಿಚಾರ ಹೊಳೆಯಿತು. ತನಗೆ ಹಾಡಲು ಬರದೇ ಇರಬಹುದು, ಕುಣಿಯಲು ಬರದೇ ಇರಬಹುದು, ಚೆಂದಾಗಿ ಗೂಡೂಕಟ್ಟುವುದಕ್ಕೂ ಬರದೇ ಇರಬಹುದು. ಆದರೆ, ಅನ್ನವನ್ನು ಬಳಗಕ್ಕೆಲ್ಲಾ ಹಂಚುವ ಗುಣ ತನಗಲ್ಲದೆ ಇನ್ಯಾರಿಗಿದೆ?

ಕೋಗಿಲೆಯಾಗಲಿ, ನವಿಲಾಗಲಿ, ಗುಬ್ಬಿಯಾಗಲಿ ತನ್ನೆಲ್ಲ ಬಳಗ ಕರೆದು ಅನ್ನ ಹಂಚುವುದಿಲ್ಲ.

ಆದರೆ ತಾನು ಬಳಗಕ್ಕೆ ಹಂಚದೆ ಎಂದೂ ಊಟ ಮಾಡಿಲ್ಲ. ಹಾಗೆ ಹೊಳೆದದ್ದೇ ಕಾಗೆ ತನ್ನ ಬಗ್ಗೆ ತಾನು ತುಂಬಾ ಅಭಿಮಾನ ಪಟ್ಟುಕೊಂಡಿತು. ಅದೇ ಖುಷಿಯಿಂದ, "ಕಾಂವ್... ಕಾಂವ್..." ಎಂದಿತು. ಉಳಿದ ಕಾಗೆಗಳೆಲ್ಲಾ, "ಏನು, ಇಷ್ಟು ಖುಷಿಯಾಗಿದ್ದಿ. ಮದ್ವೆ ಆಗ್ತಿದ್ದೀಯಾ?" ಎಂದು ಕೇಳಿದವು. ಕಾಗೆ ತುಂಬಾ ನಾಚಿತು. ನಾಚಿದಾಗ ಕಾಗೆ ಚೆಂದ ಕಂಡಿತು.

Section 2: Sentence-by-Sentence Translation

#Kannada (ಕನ್ನಡ)English Translation
1ಎಂದಿನಂತೆ ಬೆಳಗಾಯಿತು.Morning came as usual.
2ಕಾಗೆ ತನ್ನ ಗೂಡಿನಲ್ಲಿ ಸುಮ್ಮನೆ ಕೂತಿತ್ತು.The crow sat quietly in its nest.
3ಒಂದೆರಡು ಸಲ, "ಕಾಂವ್... ಕಾಂವ್..." ಅಂತು.Once or twice, it said, "Caw... caw..."
4ಆಮೇಲೆ ಅದೂ ಬೇಸರವಾಗಿ ಸುಮ್ಮನೆ ಕೂತಿತು.Then it grew bored with that too and sat quietly.
5ಆ ಸಮಯಕ್ಕೆ ಸರಿಯಾಗಿ, "ಕುಹೂ... ಕುಹೂ..." ಕೋಗಿಲೆಯ ಇಂಪಾದ ಕೂಗು ಕೇಳಿಬಂತು.Just then, the koel's sweet call rang out: "Koohoo... koohoo..."
6ಕೋಗಿಲೆ ಕೂಗು ಕೇಳಿ ಕಾಗೆಗೆ ಹಿತವೆನ್ನಿಸಿತು.Hearing the koel's call pleased the crow.
7ಸ್ವಲ್ಪ ಸಿಟ್ಟೂ ಬಂತು.It also felt a little angry.
8ತಾನೇ ಕಾವು ಕೊಟ್ಟು ಹುಟ್ಟಿಸಿದ ಕೋಗಿಲೆ ತನ್ನನ್ನು ಮೀರಿಸುವಂತೆ ಹಾಡುತ್ತಿದೆಯಲ್ಲ ಅಂತಾ ಅಸೂಯೆಯಾಯಿತು.It felt jealous that the koel it had hatched by keeping the egg warm could sing so much better than it could.
9ಏನಾದರೂ ಆಗಲಿ, ಕೋಗಿಲೆಯ ಹಾಗೆಯೇ ಹಾಡಲು ಕಲಿಯಬೇಕು ಅಂತಾ ನಿರ್ಧರಿಸಿತು.Whatever happened, it decided, it must learn to sing like the koel.
10ಕೋಗಿಲೆಯ ಬಗ್ಗೆ ಅಸೂಯೆ ಪಡುವುದಕ್ಕಿಂತ, ಅದರ ಹತ್ತಿರವೇ ಹಾಡಲು ಕಲಿತರೆ ಒಳ್ಳೆಯದಲ್ಲವೇ ಎಂದುಕೊಂಡಿತು.Rather than feel jealous of the koel, wouldn't it be better to learn to sing from it?
11ಹಾಗೆಂದು ನಿರ್ಧರಿಸಿದ ಕಾಗೆ, ಕೋಗಿಲೆಯನ್ನು ಹುಡುಕಿಕೊಂಡು ಹೋಯಿತು.Having decided this, the crow went looking for the koel.
12ಕಾಗೆಯನ್ನು ಕೋಗಿಲೆ ಸ್ವಲ್ಪ ಅನುಮಾನದಿಂದಲೇ ನೋಡಿತು.The koel looked at the crow with a little suspicion.
13ಆದರೆ ಕಾಗೆ ತುಂಬಾ ಗೌರವದಿಂದ ಕೋಗಿಲೆಯನ್ನು ಮಾತನಾಡಿಸಿತು.But the crow spoke to the koel very respectfully.
14"ನನಗೆ ಹಾಡಲು ಕಲಿಸ್ತೀಯಾ?" ಅಂತಾ ಕೇಳಿತು."Will you teach me to sing?" it asked.
15ಕೋಗಿಲೆ ಒಪ್ಪಿತು.The koel agreed.
16"ಆದರೆ ಬೆಳಿಗ್ಗೆ ಬೇಗ ಎದ್ದು ಬರಬೇಕು," ಎಂದು ಷರತ್ತು ಹಾಕಿತು."But you must get up early in the morning and come," it said, setting a condition.
17ಕಾಗೆ, "ಸರಿ," "ಸರಿ," "ಸರಿ," ಎಂದಿತು."All right, all right, all right," said the crow.
18ಮಾರನೇ ದಿನದಿಂದಲೇ ಪಾಠ ಕಲಿಸುವಿಕೆ ನಿರ್ಧಾರವಾಯಿತು.They decided to begin the lessons the very next day.
19ಕಾಗೆಗೆ ದಿನಾ ತಡವಾಗಿ ಏಳುವ ಅಭ್ಯಾಸ.The crow was used to getting up late every day.
20ಆದರೆ ನಾಳೆ ಹಾಗೆ ಮಾಡುವಂತಿರಲಿಲ್ಲ.But it could not do that tomorrow.
21ಅದಕ್ಕಾಗಿ ಎಚ್ಚರಗಂಟೆ ಇಟ್ಟುಕೊಂಡು ಮಲಗಿತು.So it set an alarm clock and went to sleep.
22ಎಚ್ಚರಗಂಟೆ ಹೊಡೆದುಕೊಂಡ ಕೂಡಲೇ ಕಾಗೆಗೆ ಎಚ್ಚರವಾಯಿತು.As soon as the alarm rang, the crow woke up.
23ಬೇಗ ಬೇಗ ತಯಾರಾಗಿ ನಿದ್ದೆಗಣ್ಣಲ್ಲೇ ಕೋಗಿಲೆಯ ಹತ್ತಿರ ಹೋಯಿತು.It got ready in a hurry and went to the koel, still sleepy-eyed.
24ಕೋಗಿಲೆ ಆಗಲೇ ತಯಾರಾಗಿ ಕುಳಿತಿತ್ತು.The koel was already sitting there, ready.
25ಕಾಗೆ ಬಂದ ಕೂಡಲೇ ಸಂಗೀತ ಪಾಠ ಆರಂಭಿಸಿತು.As soon as the crow arrived, it began the music lesson.
26ಕೋಗಿಲೆ ಎಷ್ಟು ಸಲ, ಕುಹೂ... ಕುಹೂ... ಎಂದರೂ ಕಾಗೆ ಮಾತ್ರ, ಕಾಂವ್... ಕಾಂವ್... ಎಂದೇ ಹೇಳುತ್ತಿತ್ತು.However many times the koel sang, "Koohoo... koohoo...", the crow only said, "Caw... caw..."
27ಕೊನೆಗೊಮ್ಮೆ ಕೋಗಿಲೆಗೆ ಸಿಟ್ಟು ಬಂದುಬಿಟ್ಟಿತು.At last, the koel grew angry.
28ನಿನಗೆ ಹಾಡಲು ಕಲಿಸುವುದು ನನ್ನಿಂದ ಸಾಧ್ಯವಿಲ್ಲ, ಎಂದು ಎದ್ದು ಹೋಗಿಬಿಟ್ಟಿತು."I cannot teach you to sing," it said, getting up and leaving.
29ಕಾಗೆಗೆ ತುಂಬಾ ಬೇಸರವಾಯಿತು.The crow felt very sad.
30ಸಪ್ಪೆ ಮೋರೆ ಹಾಕಿಕೊಂಡು ಮನೆಗೆ ಬಂತು.It went home with a long face.
31ಆಮೇಲೆ ಸ್ವಲ್ಪ ದಿನಗಳು ಕಳೆದವು.A few days passed.
32ಒಂದು ದಿನ ಆಕಾಶದ ತುಂಬ ಮೋಡ.One day, the sky was full of clouds.
33ಸಣ್ಣಗೆ ತಂಗಾಳಿ ಬೀಸಿ ಮಳೆ ಹನಿಯ ತೊಡಗಿತು.A cool breeze blew gently, and raindrops began to fall.
34ಕಾಗೆ ಮನೆಯಲ್ಲೇ ಕೂತಿತ್ತು.The crow sat at home.
35ಆಗ ದೂರದಲ್ಲಿ ನವಿಲು ಗರಿ ಬಿಚ್ಚಿ ಕುಣಿಯುವುದು ಕಾಣಿಸಿತು.Then, in the distance, it saw a peacock dancing with its feathers spread.
36'ಹಾಡು ಕಲಿಯಲು ಆಗಲಿಲ್ಲ, ನವಿಲಿನ ಬಳಿ ನೃತ್ಯವನ್ನಾದರೂ ಕಲಿಯಬೇಕು,' ಅಂತಾ ಕಾಗೆಗೆ ಅನ್ನಿಸಿತು.'I couldn't learn to sing; at least I should learn to dance from the peacock,' thought the crow.
37ನವಿಲಿನ ಬಳಿ ಹೋಗಿ, "ಕುಣಿಯಲು ಕಲಿಸ್ತೀಯಾ?" ಎಂದು ಕೇಳಿತು.It went to the peacock and asked, "Will you teach me to dance?"
38ನವಿಲು, "ಸರಿ!" ಎಂದಿತು."All right!" said the peacock.
39"ನನ್ನ ಹಾಗೆಯೇ ನರ್ತಿಸು," ಎಂದಿತು."Dance just like me," it said.
40ಕಾಗೆ ರೆಕ್ಕೆ ಬಿಚ್ಚಿ, ಹೆಜ್ಜೆ ಹಾಕಿತು.The crow spread its wings and took a step.
41ನವಿಲು, "ಹಾಗಲ್ಲ, ಹೀಗೆ," ಅಂತಾ ಮತ್ತೆ ಕುಣಿದು ತೋರಿಸಿತು."Not like that, like this," said the peacock, dancing again to show it.
42ಕಾಗೆ ಮತ್ತೆ ಹೆಜ್ಜೆ ಹಾಕಿತು.The crow took another step.
43"ಹಾಗಲ್ಲ!" ಎಂದು ನವಿಲು ಮತ್ತೆ ಕುಣಿದು ತೋರಿಸಿತು."Not like that!" said the peacock, showing the dance again.
44ಆಗಲೂ ಕಾಗೆ ತಪ್ಪಿತು.The crow still got it wrong.
45ಕಡೆಗೆ ನವಿಲು ಸಿಟ್ಟಿನಿಂದ, "ನಿನಗೆ ಕುಣಿಯಲು ಬರೋಲ್ಲ, ಹೋಗು," ಎಂದಿತು.Finally, the peacock said angrily, "You can't dance. Go away."
46ಕಾಗೆಗೆ ಬೇಸರವಾಯಿತು.The crow felt sad.
47ಹಾಡಲು ಬರಲಿಲ್ಲ, ಕುಣಿಯಲು ಬರಲಿಲ್ಲ.It could neither sing nor dance.
48ಚಂದಾಗಿ ಗೂಡು ಕಟ್ಟುವುದಕ್ಕಾದರೂ ಕಲಿಯಬೇಕು ಎನ್ನಿಸಿತು.It thought it should at least learn to build a lovely nest.
49ಗುಬ್ಬಿಯ ಹತ್ತಿರ ಹೋಯಿತು.It went to the sparrow.
50"ನಿನ್ನ ಹಾಗೆಯೇ ಗೂಡು ಕಟ್ಟಲು ಕಲಿಸ್ತೀಯಾ?" ಎಂದು ಕೇಳಿತು."Will you teach me to build a nest like yours?" it asked.
51ಗುಬ್ಬಿ ಒಪ್ಪಲಿಲ್ಲ.The sparrow refused.
52"ನಿನಗೆ ನನ್ನ ಹಾಗೆ ಗೂಡು ಕಟ್ಟುವುದಕ್ಕೆ ಸಾಧ್ಯವೇ ಇಲ್ಲ, ಹೋಗು," ಎಂದುಬಿಟ್ಟಿತು."You can never build a nest like mine. Go away," it said.
53ಕಾಗೆಗೆ ಮತ್ತೊಮ್ಮೆ ತುಂಬಾ ಅಪಮಾನವಾದಂತಾಯಿತು.Once again, the crow felt deeply insulted.
54ಮನೆಗೆ ಬಂತು.It came home.
55ಚಿಂತೆ ಮಾಡುತ್ತ ಕೂತಿತು.It sat there worrying.
56ಆಗ ಕೆಳಗಿನ ಮನೆಯ ಮುಸುರೆ ತೊಳೆಯುವ ಜಾಗದಲ್ಲಿ ಒಂದಿಷ್ಟು ಅನ್ನ ಬಿದ್ದಿರುವುದು ಕಾಣಿಸಿತು.Then it noticed some cooked rice lying where the dirty dishes were washed at the house below.
57ಅದನ್ನು ಕಂಡು ಅಲ್ಲಿಗೆ ಹೋಗಿ ಕುಳಿತು, "ಕಾಂವ್... ಕಾಂವ್..." ತನ್ನ ಬಳಗವನ್ನೆಲ್ಲ ಕರೆಯಿತು.Seeing it, the crow went and sat there and called all its companions: "Caw... caw..."
58ಅದರ ಬಳಗದವರೆಲ್ಲ ಬಂದರು.All its companions came.
59ಕಾಗೆ ಎಲ್ಲರಿಗೂ ಅನ್ನ ಹಂಚಿ ತಾನೂ ತಿಂದಿತು.The crow shared the rice with everyone and ate some itself.
60ಆಗ ಕಾಗೆಗೆ ಒಂದು ವಿಚಾರ ಹೊಳೆಯಿತು.Then a thought struck the crow.
61ತನಗೆ ಹಾಡಲು ಬರದೇ ಇರಬಹುದು, ಕುಣಿಯಲು ಬರದೇ ಇರಬಹುದು, ಚೆಂದಾಗಿ ಗೂಡೂಕಟ್ಟುವುದಕ್ಕೂ ಬರದೇ ಇರಬಹುದು.It might not know how to sing or dance, or even how to build a beautiful nest.
62ಆದರೆ, ಅನ್ನವನ್ನು ಬಳಗಕ್ಕೆಲ್ಲಾ ಹಂಚುವ ಗುಣ ತನಗಲ್ಲದೆ ಇನ್ಯಾರಿಗಿದೆ?But who else had its habit of sharing food with all its companions?
63ಕೋಗಿಲೆಯಾಗಲಿ, ನವಿಲಾಗಲಿ, ಗುಬ್ಬಿಯಾಗಲಿ ತನ್ನೆಲ್ಲ ಬಳಗ ಕರೆದು ಅನ್ನ ಹಂಚುವುದಿಲ್ಲ.Neither the koel, the peacock nor the sparrow called all its companions together to share rice.
64ಆದರೆ ತಾನು ಬಳಗಕ್ಕೆ ಹಂಚದೆ ಎಂದೂ ಊಟ ಮಾಡಿಲ್ಲ.But the crow had never eaten without sharing with its companions.
65ಹಾಗೆ ಹೊಳೆದದ್ದೇ ಕಾಗೆ ತನ್ನ ಬಗ್ಗೆ ತಾನು ತುಂಬಾ ಅಭಿಮಾನ ಪಟ್ಟುಕೊಂಡಿತು.As soon as this thought struck it, the crow felt very proud of itself.
66ಅದೇ ಖುಷಿಯಿಂದ, "ಕಾಂವ್... ಕಾಂವ್..." ಎಂದಿತು.In its happiness, it called, "Caw... caw..."
67ಉಳಿದ ಕಾಗೆಗಳೆಲ್ಲಾ, "ಏನು, ಇಷ್ಟು ಖುಷಿಯಾಗಿದ್ದಿ. ಮದ್ವೆ ಆಗ್ತಿದ್ದೀಯಾ?" ಎಂದು ಕೇಳಿದವು."What's this? You're so happy. Are you getting married?" all the other crows asked.
68ಕಾಗೆ ತುಂಬಾ ನಾಚಿತು.The crow felt very shy.
69ನಾಚಿದಾಗ ಕಾಗೆ ಚೆಂದ ಕಂಡಿತು.When it blushed, the crow looked lovely.

Section 3: Vocabulary

ಕೆಲವು ಪದಗಳನ್ನು ಮೂಲರೂಪದಲ್ಲಿ ನೀಡಲಾಗಿದೆ. ಕೆಲವು ಪದಗಳು ಕಥೆಯಲ್ಲಿ ಪ್ರತ್ಯಯಗಳೊಂದಿಗೆ ಬರುತ್ತವೆ.

Some words are shown in their base form; they appear with endings in the story.

Kannada (ಕನ್ನಡ)PronunciationPart of SpeechEnglish Meaning
ಕಾಗೆkaageNouncrow
ಕೋಗಿಲೆkogileNounkoel
ಗೂಡುgooduNounnest
ಕೂಗುkooguNouncall; cry
ಅಸೂಯೆasooyeNounjealousy
ಗೌರವದಿಂದgauravadindaAdverbrespectfully
ಷರತ್ತುsharattuNouncondition
ಪಾಠpaathaNounlesson
ಅಭ್ಯಾಸabhyaasaNounhabit; practice
ಎಚ್ಚರಗಂಟೆechcharaganteNounalarm clock
ಸಂಗೀತsangeetaNounmusic
ಸಿಟ್ಟುsittuNounanger
ಆಕಾಶaakaashaNounsky
ಮೋಡmodaNouncloud
ತಂಗಾಳಿtangaaliNouncool breeze
ಮಳೆmaleNounrain
ನವಿಲುnaviluNounpeacock
ರೆಕ್ಕೆrekkeNounwing
ಹೆಜ್ಜೆhejjeNounstep
ಗುಬ್ಬಿgubbiNounsparrow
ಅನ್ನannaNouncooked rice
ಗುಣgunaNounquality; trait
ಖುಷಿಯಿಂದkhushiyindaAdverbhappily
ನಾಚಿತುnaachituVerbfelt shy; blushed

Continue your Kannada learning journey with these related lessons:

Source: ಕಾಗೆ ಬಳಗವ ಕರೆಯಿತು by Venkatramana Gowda (© Pratham Books, 2004), on StoryWeaver, CC BY 4.0. English translation and learning notes by LangFastPro.

Related lessons