ಮೊಲ ಮತ್ತು ಆಮೆ — The Hare and the Tortoise

LangFastPro Editorial Team's avatar
Lesson prepared byLangFastPro Editorial Team
More

ಕಥೆಗಳ ಮೂಲಕ ಕನ್ನಡ ಕಲಿಯೋಣ.

Section 1: Kannada Story

ಮೊಲ ಮತ್ತು ಆಮೆ — The Hare and the Tortoise

A hare and a tortoise help each other beside a river in a green forest.

Listen to the story0:00 / 0:00

ಮೊಲ ಮತ್ತು ಆಮೆ ನಡುವೆ ನಡೆದ ಓಟದ ಸ್ಪರ್ಧೆ ನೆನಪಿದೆಯಲ್ಲ? ಆ ಓಟದ ಸ್ಪರ್ಧೆ ನಂತರ, ಪ್ರಾಣಿಗಳ ರಾಜ್ಯದ ತುಂಬ ಎಲ್ಲರೂ ಆಮೆ ಮತ್ತು ಮೊಲದ ಬಗ್ಗೆಯೇ ಮಾತನಾಡತೊಡಗಿದರು. ಎಲ್ಲ ಕಡೆಯೂ ಅವುಗಳದ್ದೇ ಸುದ್ದಿ ಹರಡಿತು.

ಸ್ಪರ್ಧೆಯಲ್ಲಿ ಸ್ವಲ್ಪ ಸೋಮಾರಿತನದಿಂದಾಗಿ ಮೊಲ ಸೋತಿತ್ತು. ಆಮೆ ತನ್ನ ಗುರಿಯತ್ತ ಸತತವಾಗಿ ನಡೆದು ಗೆದ್ದಿತ್ತು. ಆದರೆ ಅವೆರಡನ್ನೂ ಕಾಡಿನ ಪ್ರಜೆಗಳು ಭೇದಭಾವದಿಂದ ನೋಡಲಿಲ್ಲ. ವಿಶೇಷ ಗೌರವದಿಂದ ಕಂಡವು. ತಾನು ಗೆದ್ದೆನೆಂದು ಆಮೆ ಅಹಂಕಾರ ಪಡಲಿಲ್ಲ. ಹಾಗೆಯೇ, ಮೊಲ ತಾನು ಸೋತದ್ದು ಅವಮಾನ ಎಂದುಕೊಂಡು ಆಮೆಯ ಮೇಲೆ ಹಗೆ ಸಾಧಿಸಲು ಹೋಗಲಿಲ್ಲ.

ಇದಾದ ಮೇಲೆ ಪಕ್ಕದ ಕಾಡಿನ ರಾಜನ ಜೊತೆ ಈ ಕಾಡಿನ ರಾಜ ಒಂದು ಮಾತುಕತೆ ನಡೆಸಬೇಕಾಗಿ ಬಂತು. ತುರ್ತಾಗಿ ಆ ಮಾತುಕತೆ ನಡೆಯಬೇಕಿತ್ತು. ಆದರೆ ರಾಜನಿಗೆ ಇಲ್ಲಿಯೂ ಬೇರೆ ಕೆಲವು ಪ್ರಮುಖ ಕೆಲಸಗಳಿದ್ದವು. ಆದ್ದರಿಂದ ಇದ್ದಕ್ಕಿದ್ದಂತೆ ಪಕ್ಕದ ರಾಜ್ಯಕ್ಕೆ ಹೋಗುವಂತಿರಲಿಲ್ಲ. ಅದಕ್ಕಾಗಿ ಮೊಲ ಮತ್ತು ಆಮೆಯನ್ನೇ ರಾಜ ತನ್ನ ಪ್ರತಿನಿಧಿಗಳನ್ನಾಗಿ ಕಳಿಸಲು ಯೋಚಿಸಿದ.

"ನಿಮ್ಮಿಬ್ಬರಲ್ಲಿ ಯಾರಾದರೂ ಸರಿ, ಪಕ್ಕದ ರಾಜ್ಯಕ್ಕೆ ಹೋಗಬೇಕು."

"ನಾನು ಹೇಳಬೇಕಾಗಿರುವ ವಿಚಾರವನ್ನು ಆ ರಾಜನಿಗೆ ತಿಳಿಸಿ, ಅವನಿಂದ ವಿಚಾರ ತಿಳಿದುಕೊಂಡು ಬರಬೇಕು. ಒಂದೇ ದಿನ ಕಾಲಾವಕಾಶ," ಎಂದು ರಾಜನು ಆಮೆ ಮತ್ತು ಮೊಲಕ್ಕೆ ಅಪ್ಪಣೆ ಮಾಡಿದ.

ಪಕ್ಕದ ರಾಜ್ಯಕ್ಕೆ ಹೋಗಬೇಕಾದ ದಾರಿ ಸುಲಭದ್ದಾಗಿರಲಿಲ್ಲ. ಕಲ್ಲುಮುಳ್ಳಿನ ಹಾದಿಯಾಗಿತ್ತು. ಅಲ್ಲದೆ ನಡುವೆ ಎರಡು ನದಿಗಳು ಇದ್ದವು. ಆಮೆಯಾಗಲಿ, ಮೊಲವಾಗಲಿ ಕಷ್ಟವಿಲ್ಲದೆ ಹೋಗುವಂತಹ ದಾರಿ ಅದಾಗಿರಲಿಲ್ಲ. ಒಂದೇ ದಿನದಲ್ಲಂತೂ ಸಾಧ್ಯವೇ ಇರಲಿಲ್ಲ.

ಆಗ ಮೊಲ ಮತ್ತು ಆಮೆ ಒಂದೆಡೆ ಕೂತು ಯೋಚಿಸಿದವು. ತಮ್ಮಿಬ್ಬರಲ್ಲಿ ಯಾರೇ ಒಬ್ಬರಿಂದ ಈ ಕೆಲಸ ಆಗಲಾರದು. ಅದಕ್ಕೆ ಇಬ್ಬರೂ ಜತೆಯಾಗಿ ಹೋಗೋಣ. ದಾರಿಯಲ್ಲೆಲ್ಲ ಮೊಲ ತನ್ನ ಬೆನ್ನಿನ ಮೇಲೆ ಆಮೆಯನ್ನು ಕೂರಿಸಿಕೊಂಡು ಓಡಬೇಕು. ನದಿ ಬಂದೊಡನೆ ಆಮೆ ತನ್ನ ಬೆನ್ನಿನ ಮೇಲೆ ಮೊಲವನ್ನು ಕೂರಿಸಿಕೊಂಡು ನದಿ ದಾಟಬೇಕು. ಹೀಗೆ ಅವೆರಡೂ ನಿರ್ಧಾರ ಮಾಡಿದವು. ಈ ಯೋಚನೆ ಬಂದಿದ್ದರಿಂದ ಅವೆರಡಕ್ಕೂ ಆತಂಕ ನಿವಾರಣೆ ಆಯಿತು.

ಮಾರನೇ ದಿನ ಬೆಳಗ್ಗೆಯೇ ಎರಡೂ ತಯಾರಾದವು. ರಾಜನ ಸಂದೇಶ ತೆಗೆದುಕೊಂಡು ಪ್ರಯಾಣ ಹೊರಟವು. ಮೊಲ ತನ್ನ ಬೆನ್ನಿನ ಮೇಲೆ ಆಮೆಯನ್ನು ಕೂರಿಸಿಕೊಂಡು ಜೋರಾಗಿ ಓಡಿತು. ದಾರಿಯ ನಡುವೆ ನದಿ ಎದುರಾಯಿತು.

ಆ ಆಮೆ, ಮೊಲವನ್ನು ತನ್ನ ಬೆನ್ನಿನ ಮೇಲೆ ಕೂರಿಸಿಕೊಂಡು ನದಿ ದಾಟಿಸಿತು. ನಂತರ ಮೊಲ ಮತ್ತೆ ಆಮೆಯನ್ನು ಹೊತ್ತುಕೊಂಡು ಓಡಿತು. ಮತ್ತೊಂದು ನದಿ ಎದುರಾದಾಗ ಆಮೆ ತನ್ನ ಕೆಲಸ ಮಾಡಿತು. ಹೀಗೆ ಎರಡೂ ಜತೆಯಾಗಿ ತಮ್ಮ ಗುರಿಯನ್ನು ಬಹುಬೇಗ ತಲುಪಿದವು.

ಆ ರಾಜನೊಡನೆ ಮಾತುಕತೆ ಮುಗಿಸಿಕೊಂಡು ವಾಪಾಸ್ಸಾದವು.

ಪರಸ್ಪರ ಸಹಕಾರದಿಂದಾಗಿ, ತಮ್ಮ ರಾಜ ಹೇಳಿದ್ದಕ್ಕಿಂತಲೂ ಬೇಗನೆ ಅವು ಕರ್ತವ್ಯ ಮುಗಿಸಿ ಮರಳಿದ್ದವು.

Section 2: Sentence-by-Sentence Translation

#Kannada (ಕನ್ನಡ)English Translation
1ಮೊಲ ಮತ್ತು ಆಮೆ ನಡುವೆ ನಡೆದ ಓಟದ ಸ್ಪರ್ಧೆ ನೆನಪಿದೆಯಲ್ಲ?Do you remember the race between the hare and the tortoise?
2ಆ ಓಟದ ಸ್ಪರ್ಧೆ ನಂತರ, ಪ್ರಾಣಿಗಳ ರಾಜ್ಯದ ತುಂಬ ಎಲ್ಲರೂ ಆಮೆ ಮತ್ತು ಮೊಲದ ಬಗ್ಗೆಯೇ ಮಾತನಾಡತೊಡಗಿದರು.After that race, everyone throughout the animal kingdom began talking about the tortoise and the hare.
3ಎಲ್ಲ ಕಡೆಯೂ ಅವುಗಳದ್ದೇ ಸುದ್ದಿ ಹರಡಿತು.News about them spread everywhere.
4ಸ್ಪರ್ಧೆಯಲ್ಲಿ ಸ್ವಲ್ಪ ಸೋಮಾರಿತನದಿಂದಾಗಿ ಮೊಲ ಸೋತಿತ್ತು.The hare had lost the race because he had been a little lazy.
5ಆಮೆ ತನ್ನ ಗುರಿಯತ್ತ ಸತತವಾಗಿ ನಡೆದು ಗೆದ್ದಿತ್ತು.The tortoise had won by walking steadily towards his goal.
6ಆದರೆ ಅವೆರಡನ್ನೂ ಕಾಡಿನ ಪ್ರಜೆಗಳು ಭೇದಭಾವದಿಂದ ನೋಡಲಿಲ್ಲ.But the forest’s inhabitants did not treat the two of them differently.
7ವಿಶೇಷ ಗೌರವದಿಂದ ಕಂಡವು.They regarded both with special respect.
8ತಾನು ಗೆದ್ದೆನೆಂದು ಆಮೆ ಅಹಂಕಾರ ಪಡಲಿಲ್ಲ.The tortoise did not become proud of winning.
9ಹಾಗೆಯೇ, ಮೊಲ ತಾನು ಸೋತದ್ದು ಅವಮಾನ ಎಂದುಕೊಂಡು ಆಮೆಯ ಮೇಲೆ ಹಗೆ ಸಾಧಿಸಲು ಹೋಗಲಿಲ್ಲ.Nor did the hare see his defeat as a humiliation and try to take revenge on the tortoise.
10ಇದಾದ ಮೇಲೆ ಪಕ್ಕದ ಕಾಡಿನ ರಾಜನ ಜೊತೆ ಈ ಕಾಡಿನ ರಾಜ ಒಂದು ಮಾತುಕತೆ ನಡೆಸಬೇಕಾಗಿ ಬಂತು.After this, the king of their forest needed to hold talks with the king of the neighbouring forest.
11ತುರ್ತಾಗಿ ಆ ಮಾತುಕತೆ ನಡೆಯಬೇಕಿತ್ತು.The talks had to take place urgently.
12ಆದರೆ ರಾಜನಿಗೆ ಇಲ್ಲಿಯೂ ಬೇರೆ ಕೆಲವು ಪ್ರಮುಖ ಕೆಲಸಗಳಿದ್ದವು.But the king also had some other important work to do at home.
13ಆದ್ದರಿಂದ ಇದ್ದಕ್ಕಿದ್ದಂತೆ ಪಕ್ಕದ ರಾಜ್ಯಕ್ಕೆ ಹೋಗುವಂತಿರಲಿಲ್ಲ.So he could not leave for the neighbouring kingdom at short notice.
14ಅದಕ್ಕಾಗಿ ಮೊಲ ಮತ್ತು ಆಮೆಯನ್ನೇ ರಾಜ ತನ್ನ ಪ್ರತಿನಿಧಿಗಳನ್ನಾಗಿ ಕಳಿಸಲು ಯೋಚಿಸಿದ.He therefore thought of sending the hare and the tortoise as his representatives.
15"ನಿಮ್ಮಿಬ್ಬರಲ್ಲಿ ಯಾರಾದರೂ ಸರಿ, ಪಕ್ಕದ ರಾಜ್ಯಕ್ಕೆ ಹೋಗಬೇಕು."“One of you must go to the neighbouring kingdom.”
16"ನಾನು ಹೇಳಬೇಕಾಗಿರುವ ವಿಚಾರವನ್ನು ಆ ರಾಜನಿಗೆ ತಿಳಿಸಿ, ಅವನಿಂದ ವಿಚಾರ ತಿಳಿದುಕೊಂಡು ಬರಬೇಕು.“You must tell that king what I have to say, hear what he has to say, and return.
17ಒಂದೇ ದಿನ ಕಾಲಾವಕಾಶ," ಎಂದು ರಾಜನು ಆಮೆ ಮತ್ತು ಮೊಲಕ್ಕೆ ಅಪ್ಪಣೆ ಮಾಡಿದ.You have just one day,” the king ordered the tortoise and the hare.
18ಪಕ್ಕದ ರಾಜ್ಯಕ್ಕೆ ಹೋಗಬೇಕಾದ ದಾರಿ ಸುಲಭದ್ದಾಗಿರಲಿಲ್ಲ.The route to the neighbouring kingdom was not easy.
19ಕಲ್ಲುಮುಳ್ಳಿನ ಹಾದಿಯಾಗಿತ್ತು.It was a path full of stones and thorns.
20ಅಲ್ಲದೆ ನಡುವೆ ಎರಡು ನದಿಗಳು ಇದ್ದವು.There were also two rivers along the way.
21ಆಮೆಯಾಗಲಿ, ಮೊಲವಾಗಲಿ ಕಷ್ಟವಿಲ್ಲದೆ ಹೋಗುವಂತಹ ದಾರಿ ಅದಾಗಿರಲಿಲ್ಲ.It was not a route that either the tortoise or the hare could travel without difficulty.
22ಒಂದೇ ದಿನದಲ್ಲಂತೂ ಸಾಧ್ಯವೇ ಇರಲಿಲ್ಲ.Doing it in just one day was out of the question.
23ಆಗ ಮೊಲ ಮತ್ತು ಆಮೆ ಒಂದೆಡೆ ಕೂತು ಯೋಚಿಸಿದವು.Then the hare and the tortoise sat down together to think.
24ತಮ್ಮಿಬ್ಬರಲ್ಲಿ ಯಾರೇ ಒಬ್ಬರಿಂದ ಈ ಕೆಲಸ ಆಗಲಾರದು.Neither of them could do this job alone.
25ಅದಕ್ಕೆ ಇಬ್ಬರೂ ಜತೆಯಾಗಿ ಹೋಗೋಣ.So they would go together.
26ದಾರಿಯಲ್ಲೆಲ್ಲ ಮೊಲ ತನ್ನ ಬೆನ್ನಿನ ಮೇಲೆ ಆಮೆಯನ್ನು ಕೂರಿಸಿಕೊಂಡು ಓಡಬೇಕು.On the path, the hare would carry the tortoise on his back and run.
27ನದಿ ಬಂದೊಡನೆ ಆಮೆ ತನ್ನ ಬೆನ್ನಿನ ಮೇಲೆ ಮೊಲವನ್ನು ಕೂರಿಸಿಕೊಂಡು ನದಿ ದಾಟಬೇಕು.When they reached a river, the tortoise would carry the hare on his back and cross it.
28ಹೀಗೆ ಅವೆರಡೂ ನಿರ್ಧಾರ ಮಾಡಿದವು.That was what the two of them decided.
29ಈ ಯೋಚನೆ ಬಂದಿದ್ದರಿಂದ ಅವೆರಡಕ್ಕೂ ಆತಂಕ ನಿವಾರಣೆ ಆಯಿತು.Once they had thought of this plan, they both felt relieved.
30ಮಾರನೇ ದಿನ ಬೆಳಗ್ಗೆಯೇ ಎರಡೂ ತಯಾರಾದವು.The next morning, both were ready early.
31ರಾಜನ ಸಂದೇಶ ತೆಗೆದುಕೊಂಡು ಪ್ರಯಾಣ ಹೊರಟವು.They took the king’s message and set out on their journey.
32ಮೊಲ ತನ್ನ ಬೆನ್ನಿನ ಮೇಲೆ ಆಮೆಯನ್ನು ಕೂರಿಸಿಕೊಂಡು ಜೋರಾಗಿ ಓಡಿತು.The hare ran fast with the tortoise on his back.
33ದಾರಿಯ ನಡುವೆ ನದಿ ಎದುರಾಯಿತು.They came to a river along the way.
34ಆ ಆಮೆ, ಮೊಲವನ್ನು ತನ್ನ ಬೆನ್ನಿನ ಮೇಲೆ ಕೂರಿಸಿಕೊಂಡು ನದಿ ದಾಟಿಸಿತು.The tortoise carried the hare across the river on his back.
35ನಂತರ ಮೊಲ ಮತ್ತೆ ಆಮೆಯನ್ನು ಹೊತ್ತುಕೊಂಡು ಓಡಿತು.Then the hare carried the tortoise and ran again.
36ಮತ್ತೊಂದು ನದಿ ಎದುರಾದಾಗ ಆಮೆ ತನ್ನ ಕೆಲಸ ಮಾಡಿತು.When they reached another river, the tortoise did his part.
37ಹೀಗೆ ಎರಡೂ ಜತೆಯಾಗಿ ತಮ್ಮ ಗುರಿಯನ್ನು ಬಹುಬೇಗ ತಲುಪಿದವು.By working together like this, the two reached their destination very quickly.
38ಆ ರಾಜನೊಡನೆ ಮಾತುಕತೆ ಮುಗಿಸಿಕೊಂಡು ವಾಪಾಸ್ಸಾದವು.They finished their talks with that king and returned.
39ಪರಸ್ಪರ ಸಹಕಾರದಿಂದಾಗಿ, ತಮ್ಮ ರಾಜ ಹೇಳಿದ್ದಕ್ಕಿಂತಲೂ ಬೇಗನೆ ಅವು ಕರ್ತವ್ಯ ಮುಗಿಸಿ ಮರಳಿದ್ದವು.By helping one another, they had completed their duty and returned even sooner than their king had asked.

Section 3: Vocabulary

ಕೆಲವು ಪದಗಳನ್ನು ಮೂಲರೂಪದಲ್ಲಿ ನೀಡಲಾಗಿದೆ. / Some entries use base forms rather than the forms used in the story.

KannadaTransliterationPart of SpeechEnglish Meaning
ಮೊಲmolaNounhare
ಆಮೆaameNountortoise
ಓಟotaNounrunning; race
ಸ್ಪರ್ಧೆspardheNouncompetition
ರಾಜ್ಯraajyaNounkingdom
ಸುದ್ದಿsuddiNounnews
ಸೋಮಾರಿತನsomaaritanaNounlaziness
ಗುರಿguriNoungoal; destination
ಸತತವಾಗಿsatatavaagiAdverbsteadily; continuously
ಕಾಡುkaaduNounforest
ಗೌರವgauravaNounrespect
ಅಹಂಕಾರahankaaraNounpride; arrogance
ರಾಜraajaNounking
ಮಾತುಕತೆmaatukateNounconversation; talks
ತುರ್ತಾಗಿturtaagiAdverburgently
ಪ್ರತಿನಿಧಿpratinidhiNounrepresentative
ಅಪ್ಪಣೆappaneNouncommand; order
ದಾರಿdaariNounpath; route
ನದಿnadiNounriver
ಜತೆಯಾಗಿjateyaagiAdverbtogether
ಬೆನ್ನುbennuNounback
ಸಂದೇಶsandeshaNounmessage
ಪ್ರಯಾಣprayaanaNounjourney
ಸಹಕಾರsahakaaraNouncooperation

Continue your Kannada learning journey with these related lessons:

Source: ಮೊಲ ಮತ್ತು ಆಮೆ by Venkatramana Gowda (© Pratham Books, 2004), on StoryWeaver, CC BY 4.0. Published by Pratham Books in partnership with the Rajiv Gandhi Foundation. English translation and learning notes by LangFastPro.

Related lessons