ಮೀನು ಕೇಳಿದ ವಾರ್ತೆ — The News the Fish Heard

LangFastPro Editorial Team's avatar
Lesson prepared byLangFastPro Editorial Team
More

ಕಥೆಗಳ ಮೂಲಕ ಕನ್ನಡ ಕಲಿಯೋಣ.

Section 1: Kannada Story

ಮೀನು ಕೇಳಿದ ವಾರ್ತೆ — The News the Fish Heard

An elderly fish, smaller fish, a frog and a tortoise gather around a radio by a village stream.

Listen to the story0:00 / 0:00

ಅದೊಂದು ಪುಟ್ಟ ಹಳ್ಳಿ. ಅಲ್ಲೊಂದು ಹೊಳೆ.

ಅಲ್ಲಿ ಮೀನು, ಕಪ್ಪೆ, ಆಮೆಗಳೆಲ್ಲ ಸಂತೋಷದಿಂದ ಜೀವನ ಮಾಡಿಕೊಂಡಿದ್ದವು. ಮೀನುಗಳ ಸಂಸಾರವಂತೂ ತುಂಬ ದೊಡ್ಡದಾಗಿತ್ತು.

ಮೀನಿನ ಸಂಸಾರದ ಬಗ್ಗೆ ಕಪ್ಪೆ ಮತ್ತು ಆಮೆಗಳಿಗೂ ಗೌರವವಿತ್ತು.

ಮೀನುಗಳ ಮನೆಯಲ್ಲಿ ದೊಡ್ಡದೊಂದು ರೇಡಿಯೋ ಇದ್ದುದೇ ಅದಕ್ಕೆ ಕಾರಣವಾಗಿತ್ತು.

ಮೀನುಗಳ ಮನೆಯಲ್ಲಿ ಒಂದು ಹಿರಿಯ ಮೀನು ಇತ್ತು. ಅದರ ಮಾತನ್ನು ಕಪ್ಪೆ ಮತ್ತು ಆಮೆಯ ಕುಟುಂಬದವರೂ ಕೇಳುತ್ತಿದ್ದರು.

ಆದರೆ, ರೇಡಿಯೋ ಕೇಳುವುದಕ್ಕೆ ಮಾತ್ರ ಯಾರೂ ಅದಕ್ಕೆ ಅವಕಾಶವನ್ನೇ ಕೊಡುತ್ತಿರಲಿಲ್ಲ.

ಎಲ್ಲರಿಗೂ ಸಿನಿಮಾ ಹಾಡು ಕೇಳುವುದೆಂದರೆ ಪ್ರಾಣ. ಮರಿಮೀನು, ಮರಿಕಪ್ಪೆ, ಮರಿಆಮೆಗಳಂತೂ ರೇಡಿಯೋಗೆ ಅಂಟಿಕೊಂಡೇ ಇರುತ್ತಿದ್ದವು.

ಹಾಗಾಗಿ ಹಿರಿಯ ಮೀನು ವಾರ್ತೆ ಕೇಳಲು ಆಗುತ್ತಿಲ್ಲವಲ್ಲ ಎಂದು ಕೊರಗುತ್ತಲೇ ಇರುತ್ತಿತ್ತು.

ಹಾಗೂ ಹೀಗೂ ಮಾಡಿ ಮಕ್ಕಳಿಂದ ರೇಡಿಯೋ ಪಡೆದುಕೊಳ್ಳುವ ಹೊತ್ತಿಗೆ ವಾರ್ತೆ ಮುಗಿದೇ ಹೋಗಿರುತ್ತಿತ್ತು. ಒಮ್ಮೊಮ್ಮೆ,“ಇಲ್ಲಿಗೆ ವಾರ್ತಾ ಪ್ರಸಾರ ಮುಕ್ತಾಯವಾಯಿತು,” ಎಂಬುದನ್ನು ಮಾತ್ರ ಕೇಳಿಸಿಕೊಂಡು ಅದು ನಿರಾಸೆ ಪಡುತ್ತಿತ್ತು.

ಆ ದಿನವೂ ಅದು ಮಕ್ಕಳಿಂದ ರೇಡಿಯೋ ತೆಗೆದುಕೊಳ್ಳುವ ಹೊತ್ತಿಗೆ ಸಾಕಷ್ಟು ಸಮಯವಾಗಿತ್ತು. ವಾರ್ತೆ ಕೇಳಲು ತಿರುಗಿಸಿತು. ಅದರ ಅದೃಷ್ಟಕ್ಕೆ, “ಕೊನೆಯಲ್ಲಿ ಮತ್ತೊಮ್ಮೆ ಮುಖ್ಯಾಂಶಗಳು,” ಎಂಬುದು ಕೇಳಿಸಿತು. ಇಷ್ಟಾದರೂ ಸಿಕ್ಕಿತಲ್ಲ ಎಂದು ಸಂತಸ ಪಟ್ಟಿತು. ಆದರೆ ವಾರ್ತೆ ಮಾತ್ರ ಸಂತಸ ತರುವಂತಿರಲಿಲ್ಲ.

“ಹೊಳೆಗಳಿಗೆ ಔಷಧ ಹಾಕಿ ಮೀನುಗಳನ್ನೆಲ್ಲ ಹಿಡಿದುಕೊಂಡು ಹೋಗುವವರು ಬರುತ್ತಿದ್ದಾರೆ, ಬಹಳಷ್ಟು ಹೊಳೆಗಳಲ್ಲಿ ಮೀನುಗಳು ಪ್ರಾಣ ಕಳೆದುಕೊಂಡು ಅವರ ಪಾಲಾಗಿವೆ,” ಎಂಬ ಸುದ್ದಿ ಕೇಳಿ ಅದು ಆಘಾತಗೊಂಡಿತು.

ವಿಷಯ ಇತರ ಮೀನುಗಳಿಗೂ ಗೊತ್ತಾಯಿತು. ಕಪ್ಪೆ, ಆಮೆಗಳಿಗೂ ಭಯವಾಯಿತು. ಏನೂ ತೋಚದಂತಾಗಿ ಕುಳಿತು ಬಿಟ್ಟವು. ಎಂದಿನಂತೆ ಅಜ್ಜನಿಂದ ರೇಡಿಯೋ ಕಿತ್ತುಕೊಳ್ಳಲು ಯಾರೂ ಬರಲಿಲ್ಲ. ಮುಂದೇನು ಎಂಬ ಚಿಂತೆಯೇ ಎಲ್ಲರನ್ನೂ ಕಾಡತೊಡಗಿತು.

ಅದೇ ಸಮಯಕ್ಕೆ ಆ ಊರಿನ ಮುಖ್ಯಸ್ಥನ ಮಗಳು ನೀರಿಗಾಗಿ ಬಿಂದಿಗೆ ಹಿಡಿದು ಅಲ್ಲಿಗೆ ಬಂದಳು. ಹಿರಿಯ ಮೀನು ಮತ್ತು ಊರ ಮುಖ್ಯಸ್ಥ ಸ್ನೇಹಿತರಾಗಿದ್ದರು.

ಮುಖ್ಯಸ್ಥನ ಮಗಳಿಗೆ, “ನಿನ್ನ ತಂದೆಗೆ ಇಲ್ಲಿಗೊಮ್ಮೆ ಬಂದು ಹೋಗುವಂತೆ,” ಹೇಳು ಎಂದು ಹೇಳಿ ಕಳುಹಿಸಿತು ಹಿರಿಯ ಮೀನು.

ಊರ ಮುಖ್ಯಸ್ಥ ಸ್ವಲ್ಪವೂ ತಡಮಾಡದೆ ಹೊಳೆಯತ್ತ ಹೊರಟ. ಆತ ಬಂದೊಡನೆಯೇ ಹಿರಿಯ ಮೀನು ಕರೆದು ಕೂರಿಸಿತು. ಒಳಗೆ ಯಾರನ್ನೋ ಕೂಗಿ ಕಾಫಿ ಮಾಡಲು ಹೇಳಿತು. ನಂತರ ತಾನು ವಾರ್ತೆಯಲ್ಲಿ ಕೇಳಿದ ವಿಷಯ ತಿಳಿಸಿತು.

“ಅಯ್ಯೋ... ಹೌದೇ?” ಎಂದು ಮುಖ್ಯಸ್ಥನೂ ಒಮ್ಮೆ ದಿಗಿಲುಪಟ್ಟನು. ಸ್ವಲ್ಪ ಯೋಚಿಸಿದ ನಂತರ, “ನೀವೇನೂ ಚಿಂತೆ ಮಾಡಬೇಡಿ. ನಿಮಗೇನೂ ತೊಂದರೆಯಾಗದ ಹಾಗೆ ನಾನು ವ್ಯವಸ್ಥೆ ಮಾಡುತ್ತೇನೆ,” ಎಂದನು.

ಎಲ್ಲರಿಗೂ ಹೋದ ಜೀವ ಬಂದಂತಾಯಿತು. ಕಾಫಿ ಕುಡಿದು ಮುಖ್ಯಸ್ಥ ಮನೆಯತ್ತ ಹೊರಟನು. “ನಿಶ್ಚಿಂತೆಯಿಂದ ಇರಿ,” ಎಂದು ಪುನಃ ಹೇಳಲು ಮರೆಯಲಿಲ್ಲ.

ಅಜ್ಜ ಈ ವಾರ್ತೆ ಕೇಳದಿದ್ದರೆ ದೊಡ್ಡ ಅನಾಹುತವೇ ಆಗುತ್ತಿತ್ತು ಎಂದು ಎಲ್ಲ ಕಿರಿ-ಮರಿ ಮೀನುಗಳಿಗೂ ಅನಿಸಿತು.

ಎಲ್ಲರ ಮುಖ ನೋಡಿದರೆ, ತಮ್ಮ ತಪ್ಪನ್ನು ತಿದ್ದಿಕೊಳ್ಳಲು ತೀರ್ಮಾನಿಸಿದಂತೆ ಕಾಣಿಸುತ್ತಿತ್ತು.

Section 2: Sentence-by-Sentence Translation

#Kannada (ಕನ್ನಡ)English Translation
1ಅದೊಂದು ಪುಟ್ಟ ಹಳ್ಳಿ.There was a little village.
2ಅಲ್ಲೊಂದು ಹೊಳೆ.A stream ran through it.
3ಅಲ್ಲಿ ಮೀನು, ಕಪ್ಪೆ, ಆಮೆಗಳೆಲ್ಲ ಸಂತೋಷದಿಂದ ಜೀವನ ಮಾಡಿಕೊಂಡಿದ್ದವು.Fish, frogs and tortoises lived happily there.
4ಮೀನುಗಳ ಸಂಸಾರವಂತೂ ತುಂಬ ದೊಡ್ಡದಾಗಿತ್ತು.The fish family was very large.
5ಮೀನಿನ ಸಂಸಾರದ ಬಗ್ಗೆ ಕಪ್ಪೆ ಮತ್ತು ಆಮೆಗಳಿಗೂ ಗೌರವವಿತ್ತು.The frogs and tortoises respected the fish family.
6ಮೀನುಗಳ ಮನೆಯಲ್ಲಿ ದೊಡ್ಡದೊಂದು ರೇಡಿಯೋ ಇದ್ದುದೇ ಅದಕ್ಕೆ ಕಾರಣವಾಗಿತ್ತು.That was because the fish had a large radio at home.
7ಮೀನುಗಳ ಮನೆಯಲ್ಲಿ ಒಂದು ಹಿರಿಯ ಮೀನು ಇತ್ತು.An elderly fish lived in the fish family.
8ಅದರ ಮಾತನ್ನು ಕಪ್ಪೆ ಮತ್ತು ಆಮೆಯ ಕುಟುಂಬದವರೂ ಕೇಳುತ್ತಿದ್ದರು.The frog and tortoise families listened to what he said too.
9ಆದರೆ, ರೇಡಿಯೋ ಕೇಳುವುದಕ್ಕೆ ಮಾತ್ರ ಯಾರೂ ಅದಕ್ಕೆ ಅವಕಾಶವನ್ನೇ ಕೊಡುತ್ತಿರಲಿಲ್ಲ.But no one ever gave him a chance to listen to the radio.
10ಎಲ್ಲರಿಗೂ ಸಿನಿಮಾ ಹಾಡು ಕೇಳುವುದೆಂದರೆ ಪ್ರಾಣ.Everyone loved listening to film songs.
11ಮರಿಮೀನು, ಮರಿಕಪ್ಪೆ, ಮರಿಆಮೆಗಳಂತೂ ರೇಡಿಯೋಗೆ ಅಂಟಿಕೊಂಡೇ ಇರುತ್ತಿದ್ದವು.The little fish, frogs and tortoises were always glued to the radio.
12ಹಾಗಾಗಿ ಹಿರಿಯ ಮೀನು ವಾರ್ತೆ ಕೇಳಲು ಆಗುತ್ತಿಲ್ಲವಲ್ಲ ಎಂದು ಕೊರಗುತ್ತಲೇ ಇರುತ್ತಿತ್ತು.So the elderly fish kept feeling unhappy that he could not listen to the news.
13ಹಾಗೂ ಹೀಗೂ ಮಾಡಿ ಮಕ್ಕಳಿಂದ ರೇಡಿಯೋ ಪಡೆದುಕೊಳ್ಳುವ ಹೊತ್ತಿಗೆ ವಾರ್ತೆ ಮುಗಿದೇ ಹೋಗಿರುತ್ತಿತ್ತು.By the time he somehow managed to get the radio from the children, the news would already be over.
14ಒಮ್ಮೊಮ್ಮೆ,“ಇಲ್ಲಿಗೆ ವಾರ್ತಾ ಪ್ರಸಾರ ಮುಕ್ತಾಯವಾಯಿತು,” ಎಂಬುದನ್ನು ಮಾತ್ರ ಕೇಳಿಸಿಕೊಂಡು ಅದು ನಿರಾಸೆ ಪಡುತ್ತಿತ್ತು.Sometimes all he heard was, “That concludes the news broadcast,” and he would feel disappointed.
15ಆ ದಿನವೂ ಅದು ಮಕ್ಕಳಿಂದ ರೇಡಿಯೋ ತೆಗೆದುಕೊಳ್ಳುವ ಹೊತ್ತಿಗೆ ಸಾಕಷ್ಟು ಸಮಯವಾಗಿತ್ತು.That day too, it was quite late by the time he got the radio from the children.
16ವಾರ್ತೆ ಕೇಳಲು ತಿರುಗಿಸಿತು.He tuned it to the news.
17ಅದರ ಅದೃಷ್ಟಕ್ಕೆ, “ಕೊನೆಯಲ್ಲಿ ಮತ್ತೊಮ್ಮೆ ಮುಖ್ಯಾಂಶಗಳು,” ಎಂಬುದು ಕೇಳಿಸಿತು.Luckily, he heard, “Finally, the headlines once again.”
18ಇಷ್ಟಾದರೂ ಸಿಕ್ಕಿತಲ್ಲ ಎಂದು ಸಂತಸ ಪಟ್ಟಿತು.He was glad he had caught at least that much.
19ಆದರೆ ವಾರ್ತೆ ಮಾತ್ರ ಸಂತಸ ತರುವಂತಿರಲಿಲ್ಲ.But the news itself was not cheerful.
20“ಹೊಳೆಗಳಿಗೆ ಔಷಧ ಹಾಕಿ ಮೀನುಗಳನ್ನೆಲ್ಲ ಹಿಡಿದುಕೊಂಡು ಹೋಗುವವರು ಬರುತ್ತಿದ್ದಾರೆ, ಬಹಳಷ್ಟು ಹೊಳೆಗಳಲ್ಲಿ ಮೀನುಗಳು ಪ್ರಾಣ ಕಳೆದುಕೊಂಡು ಅವರ ಪಾಲಾಗಿವೆ,” ಎಂಬ ಸುದ್ದಿ ಕೇಳಿ ಅದು ಆಘಾತಗೊಂಡಿತು.He was shocked to hear the report: “People are coming to put chemicals in the streams and catch all the fish. In many streams, fish have died and fallen into their hands.”
21ವಿಷಯ ಇತರ ಮೀನುಗಳಿಗೂ ಗೊತ್ತಾಯಿತು.The other fish heard about it too.
22ಕಪ್ಪೆ, ಆಮೆಗಳಿಗೂ ಭಯವಾಯಿತು.The frogs and tortoises were frightened as well.
23ಏನೂ ತೋಚದಂತಾಗಿ ಕುಳಿತು ಬಿಟ್ಟವು.They sat down, not knowing what to do.
24ಎಂದಿನಂತೆ ಅಜ್ಜನಿಂದ ರೇಡಿಯೋ ಕಿತ್ತುಕೊಳ್ಳಲು ಯಾರೂ ಬರಲಿಲ್ಲ.No one came to snatch the radio from Grandpa as they usually did.
25ಮುಂದೇನು ಎಂಬ ಚಿಂತೆಯೇ ಎಲ್ಲರನ್ನೂ ಕಾಡತೊಡಗಿತು.Everyone began worrying about what would happen next.
26ಅದೇ ಸಮಯಕ್ಕೆ ಆ ಊರಿನ ಮುಖ್ಯಸ್ಥನ ಮಗಳು ನೀರಿಗಾಗಿ ಬಿಂದಿಗೆ ಹಿಡಿದು ಅಲ್ಲಿಗೆ ಬಂದಳು.Just then, the village headman’s daughter came there with a pot to collect water.
27ಹಿರಿಯ ಮೀನು ಮತ್ತು ಊರ ಮುಖ್ಯಸ್ಥ ಸ್ನೇಹಿತರಾಗಿದ್ದರು.The elderly fish and the village headman were friends.
28ಮುಖ್ಯಸ್ಥನ ಮಗಳಿಗೆ, “ನಿನ್ನ ತಂದೆಗೆ ಇಲ್ಲಿಗೊಮ್ಮೆ ಬಂದು ಹೋಗುವಂತೆ,” ಹೇಳು ಎಂದು ಹೇಳಿ ಕಳುಹಿಸಿತು ಹಿರಿಯ ಮೀನು.The elderly fish sent the headman’s daughter back with a message: “Tell your father to come here for a visit.”
29ಊರ ಮುಖ್ಯಸ್ಥ ಸ್ವಲ್ಪವೂ ತಡಮಾಡದೆ ಹೊಳೆಯತ್ತ ಹೊರಟ.The village headman set off for the stream without any delay.
30ಆತ ಬಂದೊಡನೆಯೇ ಹಿರಿಯ ಮೀನು ಕರೆದು ಕೂರಿಸಿತು.As soon as he arrived, the elderly fish called him over and offered him a seat.
31ಒಳಗೆ ಯಾರನ್ನೋ ಕೂಗಿ ಕಾಫಿ ಮಾಡಲು ಹೇಳಿತು.He called to someone inside and asked them to make coffee.
32ನಂತರ ತಾನು ವಾರ್ತೆಯಲ್ಲಿ ಕೇಳಿದ ವಿಷಯ ತಿಳಿಸಿತು.Then he told the headman what he had heard on the news.
33“ಅಯ್ಯೋ... ಹೌದೇ?” ಎಂದು ಮುಖ್ಯಸ್ಥನೂ ಒಮ್ಮೆ ದಿಗಿಲುಪಟ್ಟನು.“Oh dear... really?” the headman exclaimed in alarm.
34ಸ್ವಲ್ಪ ಯೋಚಿಸಿದ ನಂತರ, “ನೀವೇನೂ ಚಿಂತೆ ಮಾಡಬೇಡಿ. ನಿಮಗೇನೂ ತೊಂದರೆಯಾಗದ ಹಾಗೆ ನಾನು ವ್ಯವಸ್ಥೆ ಮಾಡುತ್ತೇನೆ,” ಎಂದನು.After thinking for a little while, he said, “Don’t worry at all. I will make arrangements to keep you safe.”
35ಎಲ್ಲರಿಗೂ ಹೋದ ಜೀವ ಬಂದಂತಾಯಿತು.Everyone felt as though they had been given their lives back.
36ಕಾಫಿ ಕುಡಿದು ಮುಖ್ಯಸ್ಥ ಮನೆಯತ್ತ ಹೊರಟನು.After drinking his coffee, the headman set off for home.
37“ನಿಶ್ಚಿಂತೆಯಿಂದ ಇರಿ,” ಎಂದು ಪುನಃ ಹೇಳಲು ಮರೆಯಲಿಲ್ಲ.He did not forget to say once more, “Put your minds at ease.”
38ಅಜ್ಜ ಈ ವಾರ್ತೆ ಕೇಳದಿದ್ದರೆ ದೊಡ್ಡ ಅನಾಹುತವೇ ಆಗುತ್ತಿತ್ತು ಎಂದು ಎಲ್ಲ ಕಿರಿ-ಮರಿ ಮೀನುಗಳಿಗೂ ಅನಿಸಿತು.All the young and little fish felt that a terrible disaster would have happened if Grandpa had not heard the news.
39ಎಲ್ಲರ ಮುಖ ನೋಡಿದರೆ, ತಮ್ಮ ತಪ್ಪನ್ನು ತಿದ್ದಿಕೊಳ್ಳಲು ತೀರ್ಮಾನಿಸಿದಂತೆ ಕಾಣಿಸುತ್ತಿತ್ತು.Looking at their faces, it seemed that everyone had decided to correct their mistake.

Section 3: Vocabulary

ಕೆಲವು ಪದಗಳನ್ನು ಮೂಲರೂಪದಲ್ಲಿ ನೀಡಲಾಗಿದೆ. / Some entries use base forms rather than the forms used in the story.

KannadaTransliterationPart of SpeechEnglish Meaning
ಹಳ್ಳಿhalliNounvillage
ಹೊಳೆholeNounstream
ಮೀನುmeenuNounfish
ಕಪ್ಪೆkappeNounfrog
ಆಮೆaameNountortoise
ಸಂಸಾರsamsaaraNounfamily; household
ಗೌರವgauravaNounrespect
ಮನೆmaneNounhome; house
ಹಿರಿಯhiriyaAdjectiveelder; senior
ಅವಕಾಶavakaashaNounopportunity; chance
ಹಾಡುhaaduNounsong
ವಾರ್ತೆvaartheNounnews
ನಿರಾಸೆniraaseNoundisappointment
ಅದೃಷ್ಟadrushtaNounluck
ಮುಖ್ಯಾಂಶಗಳುmukhyaamshagaluNounheadlines; main points
ಭಯbhayaNounfear
ಅಜ್ಜajjaNoungrandfather
ಚಿಂತೆchinteNounworry
ಮಗಳುmagaluNoundaughter
ಬಿಂದಿಗೆbindigeNounwater pot
ಸ್ನೇಹಿತರುsnehitaruNounfriends
ತಂದೆtandeNounfather
ತೊಂದರೆtondareNountrouble; difficulty
ಅನಾಹುತanaahutaNoundisaster; calamity

Continue your Kannada learning journey with these related lessons:

Source: ಮೀನು ಕೇಳಿದ ವಾರ್ತೆ by Venkatramana Gowda (© Pratham Books, 2004), on StoryWeaver, CC BY 4.0. Published by Pratham Books in partnership with the Rajiv Gandhi Foundation. English translation and learning notes by LangFastPro.

Related lessons