ಕಥೆಗಳ ಮೂಲಕ ಕನ್ನಡ ಕಲಿಯೋಣ.
Section 1: Kannada Story
ಅಜ್ಜಿಯು ಬಡಿಸಿದ ರೊಟ್ಟಿ — The Grandmother’s Rotti (Excerpt)

This excerpt is from a North Karnataka folktale. A grandmother and her grandson Malleshi have come to Chennapattana to find work. When a wealthy man turns a visitor away, the grandmother offers him a meal.
ಶಿವನು ಸಾಹುಕಾರನನ್ನು ಪರೀಕ್ಷಿಸಬೇಕೆಂದು ಮುಪ್ಪಿನ ಭಿಕ್ಷುಕನಾಗಿ ಬಂದು ಒಂದು ದಿನ ಸಾಹುಕಾರನ ಮನೆಯ ಮುಂದೆ ನಿಂತು – “ಅನ್ನ ನೀಡಿರಿ” ಎಂದು ಕೂಗ ತೊಡಗಲು, “ಮುಂದೆ ಸಾಗು” ಎಂದು ಸಾಹುಕಾರನು ಅಬ್ಬರಿಸಿದನು. ಅದನ್ನು ಕಂಡು ಕನಿಕರವೆನಿಸಿ ಅಜ್ಜಿಯು ಆ ಮುದುಕನನ್ನು ಕರೆತಂದು ಕುಳ್ಳಿರಿಸಿ ಊಟಬಡಿಸಿದಳು. ಒಂದು ರೊಟ್ಟಿ, ಪುಂಡಿಪಲ್ಲೆ. ಹಸಿದ ಭಿಕ್ಷುಕನು ಅದನ್ನು ಗಪಗಪನೆ ತಿಂದು ಇನ್ನೂ ಒಂದು ರೊಟ್ಟಿ ಕೇಳಿದನು. ಮೊಮ್ಮಗನಿಗಾಗಿ ಇಟ್ಟ ರೊಟ್ಟಿಯನ್ನೂ ಅಜ್ಜಿಯು ಭಿಕ್ಷುಕನಿಗೆ ನೀಡಿದಳು ಅದೂ ಸಾಕಾಗದೆ – “ಅಜ್ಜೀ, ನೀನು ಬಯ್ದರೂ ಚಿಂತೆಯಿಲ್ಲ. ಇನ್ನೊಂದು ರೊಟ್ಟಿ ಕೊಡಮ್ಮ” ಎಂದನು ಆ ಭಿಕ್ಷುಕ.
ಅಜ್ಜಿಯ ಬಳಿಯಲ್ಲಿಯೂ ರೊಟ್ಟಿ ಉಳಿದಿರಲಿಲ್ಲ. ವಿಚಾರಿಸತೊಡಗಿದಳು. ಮರು ಕ್ಷಣದಲ್ಲಿ ಏನೋ ಹೊಳೆದಂತಾಗಿ ಅಲ್ಲಿಂದೆದ್ದು ಸಾಹುಕಾರನ ಮನೆಗೆ ಹೋಗಿ ಒಂದು ರೊಟ್ಟಿಯನ್ನು ಕೈಗಡ ಕೇಳಿದಳು. “ರೊಟ್ಟಿಯನ್ನು ಕೈಗಡ ಕೊಡುವದಿಲ್ಲ. ಸಾಲವಾಗಿ ಕೊಡುತ್ತೇನೆ. ಅದಕ್ಕೆ ಬಡ್ಡಿ ಬೀಳುತ್ತದೆ” ಎಂದನು.
ಅಜ್ಜಿ ಅದಕ್ಕೊಪ್ಪಲು ಸಾಹುಕಾರನು ಒಳಗೆ ಹೋಗಿ ಹೆಂಡತಿಗೆ ಹೇಳಿದನು, ಕಿವಿಯಲ್ಲಿ – “ತುಸು ಹಿಟ್ಟು ಹಿಡಿದು ತೆಳ್ಳಗಿನ ಒಂದು ರೊಟ್ಟಿ ಮಾಡಿಕೊಡು.” ಸಾಹುಕಾರನಿತ್ತ ರೊಟ್ಟಿಯನ್ನು ತಂದು ಅಜ್ಜಿ ಭಿಕ್ಷುಕನಿಗೆ ನೀಡಿದಳು. ಆತನು ಉಂಡು ಸಂತೃಪ್ತನಾಗಿ ಅಜ್ಜಿಗೊಂದು ದುಡ್ಡುಕೊಟ್ಟು – “ನಿನ್ನ ಮೊಮ್ಮಗನಿಗೆ ಚುರುಮುರಿ ತಿನ್ನಲಿಕ್ಕೆ” ಎಂದನು. ಅಜ್ಜಿ ಆ ದುಡ್ಡನ್ನು ತನ್ನ ಮುರುಕ ಪೆಟ್ಟಿಗೆಯಲ್ಲಿಟ್ಟಳು.
ಮಧ್ಯಾಹ್ನದ ಹೊತ್ತಿಗೆ ಮಲ್ಲೇಶಿ ಹೊಲದಿಂದ ಹಸಿದು ಬಂದು, ಊಟಕ್ಕೆ ಸಿದ್ಧನಾದನು. ಅಜ್ಜಿಗೇನೂ ತಿಳಿಯದಾಯಿತು. ಮನೆಯಲ್ಲಿ ರೊಟ್ಟಿಯೂ ಇರಲಿಲ್ಲ, ಹಿಟ್ಟೂ ಇರಲಿಲ್ಲ. “ಒಂದು ದುಡ್ಡು ಅದೆ, ಚುರುಮುರಿಕೊಂಡು ತಿನ್ನು” ಎಂದು ಪೆಟ್ಟಿಗೆ ತೆಗೆದು ನೋಡಿದಾಗ, ಪೆಟ್ಟಿಗೆಯ ತುಂಬ ಬಂಗಾರವಾಗಿತ್ತು.
“ಇದನ್ನೆಲ್ಲಿಂದ ತಂದಿ ? ಯಾರು ಕೊಟ್ಟರು ?” ಎಂದು ಕೇಳಿದನು ಮಲ್ಲೇಶಿ. ಅಜ್ಜಿ ನಡೆದ ಕಥೆಯನ್ನೆಲ್ಲ ಹೇಳಿದಳು.
ಪೆಟ್ಟಿಗೆಯೊಳಗಿನ ಅರ್ಧಬಂಗಾರ ಮಾರಿ, ಬೆಚ್ಚಗಿನ ಮನೆ ಕಟ್ಟಿಸಿದರು. ಎತ್ತು ಗಾಡಿ ಕೊಂಡರು. ಮಲ್ಲೇಶಿಯೂ ಒಬ್ಬ ಸಾಹುಕಾರನೇ ಆಗಿ ಕುಳಿತನು, ಆ ಚೆನ್ನೆಪಟ್ಟಣದಲ್ಲಿ.
Section 2: Sentence-by-Sentence Translation
| # | Kannada (ಕನ್ನಡ) | English Translation |
|---|---|---|
| 1 | ಶಿವನು ಸಾಹುಕಾರನನ್ನು ಪರೀಕ್ಷಿಸಬೇಕೆಂದು ಮುಪ್ಪಿನ ಭಿಕ್ಷುಕನಾಗಿ ಬಂದು ಒಂದು ದಿನ ಸಾಹುಕಾರನ ಮನೆಯ ಮುಂದೆ ನಿಂತು – “ಅನ್ನ ನೀಡಿರಿ” ಎಂದು ಕೂಗ ತೊಡಗಲು, “ಮುಂದೆ ಸಾಗು” ಎಂದು ಸಾಹುಕಾರನು ಅಬ್ಬರಿಸಿದನು. | One day, Shiva took the form of an elderly beggar to test the wealthy man. He stood outside the man’s house and called, “Please give me some food.” The man bellowed, “Move along!” |
| 2 | ಅದನ್ನು ಕಂಡು ಕನಿಕರವೆನಿಸಿ ಅಜ್ಜಿಯು ಆ ಮುದುಕನನ್ನು ಕರೆತಂದು ಕುಳ್ಳಿರಿಸಿ ಊಟಬಡಿಸಿದಳು. | Seeing this, the grandmother felt sorry for the old man, brought him over, sat him down and served him a meal. |
| 3 | ಒಂದು ರೊಟ್ಟಿ, ಪುಂಡಿಪಲ್ಲೆ. | One rotti and a helping of leafy greens. |
| 4 | ಹಸಿದ ಭಿಕ್ಷುಕನು ಅದನ್ನು ಗಪಗಪನೆ ತಿಂದು ಇನ್ನೂ ಒಂದು ರೊಟ್ಟಿ ಕೇಳಿದನು. | The hungry beggar gobbled it up and asked for another rotti. |
| 5 | ಮೊಮ್ಮಗನಿಗಾಗಿ ಇಟ್ಟ ರೊಟ್ಟಿಯನ್ನೂ ಅಜ್ಜಿಯು ಭಿಕ್ಷುಕನಿಗೆ ನೀಡಿದಳು ಅದೂ ಸಾಕಾಗದೆ – “ಅಜ್ಜೀ, ನೀನು ಬಯ್ದರೂ ಚಿಂತೆಯಿಲ್ಲ. ಇನ್ನೊಂದು ರೊಟ್ಟಿ ಕೊಡಮ್ಮ” ಎಂದನು ಆ ಭಿಕ್ಷುಕ. | The grandmother gave him the rotti she had put aside for her grandson, too. It still wasn’t enough. “Grandma, I don’t mind if you scold me. Please give me another rotti,” the beggar said. |
| 6 | ಅಜ್ಜಿಯ ಬಳಿಯಲ್ಲಿಯೂ ರೊಟ್ಟಿ ಉಳಿದಿರಲಿಲ್ಲ. | The grandmother had no rotti left either. |
| 7 | ವಿಚಾರಿಸತೊಡಗಿದಳು. | She began to think. |
| 8 | ಮರು ಕ್ಷಣದಲ್ಲಿ ಏನೋ ಹೊಳೆದಂತಾಗಿ ಅಲ್ಲಿಂದೆದ್ದು ಸಾಹುಕಾರನ ಮನೆಗೆ ಹೋಗಿ ಒಂದು ರೊಟ್ಟಿಯನ್ನು ಕೈಗಡ ಕೇಳಿದಳು. | Then an idea struck her. She got up, went to the wealthy man’s house and asked to borrow a rotti. |
| 9 | “ರೊಟ್ಟಿಯನ್ನು ಕೈಗಡ ಕೊಡುವದಿಲ್ಲ. ಸಾಲವಾಗಿ ಕೊಡುತ್ತೇನೆ. ಅದಕ್ಕೆ ಬಡ್ಡಿ ಬೀಳುತ್ತದೆ” ಎಂದನು. | “I don’t lend rottis for free. I’ll give you one on credit. You’ll owe interest,” he said. |
| 10 | ಅಜ್ಜಿ ಅದಕ್ಕೊಪ್ಪಲು ಸಾಹುಕಾರನು ಒಳಗೆ ಹೋಗಿ ಹೆಂಡತಿಗೆ ಹೇಳಿದನು, ಕಿವಿಯಲ್ಲಿ – “ತುಸು ಹಿಟ್ಟು ಹಿಡಿದು ತೆಳ್ಳಗಿನ ಒಂದು ರೊಟ್ಟಿ ಮಾಡಿಕೊಡು.” | When the grandmother agreed, the wealthy man went inside and whispered to his wife, “Take a little flour and make one thin rotti.” |
| 11 | ಸಾಹುಕಾರನಿತ್ತ ರೊಟ್ಟಿಯನ್ನು ತಂದು ಅಜ್ಜಿ ಭಿಕ್ಷುಕನಿಗೆ ನೀಡಿದಳು. | The grandmother brought the rotti the wealthy man had given her and served it to the beggar. |
| 12 | ಆತನು ಉಂಡು ಸಂತೃಪ್ತನಾಗಿ ಅಜ್ಜಿಗೊಂದು ದುಡ್ಡುಕೊಟ್ಟು – “ನಿನ್ನ ಮೊಮ್ಮಗನಿಗೆ ಚುರುಮುರಿ ತಿನ್ನಲಿಕ್ಕೆ” ಎಂದನು. | He ate his fill and gave her a coin. “So your grandson can buy some puffed rice,” he said. |
| 13 | ಅಜ್ಜಿ ಆ ದುಡ್ಡನ್ನು ತನ್ನ ಮುರುಕ ಪೆಟ್ಟಿಗೆಯಲ್ಲಿಟ್ಟಳು. | The grandmother put the coin in her old, battered chest. |
| 14 | ಮಧ್ಯಾಹ್ನದ ಹೊತ್ತಿಗೆ ಮಲ್ಲೇಶಿ ಹೊಲದಿಂದ ಹಸಿದು ಬಂದು, ಊಟಕ್ಕೆ ಸಿದ್ಧನಾದನು. | At noon Malleshi came back from the fields hungry, ready to eat. |
| 15 | ಅಜ್ಜಿಗೇನೂ ತಿಳಿಯದಾಯಿತು. | The grandmother didn’t know what to do. |
| 16 | ಮನೆಯಲ್ಲಿ ರೊಟ್ಟಿಯೂ ಇರಲಿಲ್ಲ, ಹಿಟ್ಟೂ ಇರಲಿಲ್ಲ. | There was no rotti in the house, and no flour either. |
| 17 | “ಒಂದು ದುಡ್ಡು ಅದೆ, ಚುರುಮುರಿಕೊಂಡು ತಿನ್ನು” ಎಂದು ಪೆಟ್ಟಿಗೆ ತೆಗೆದು ನೋಡಿದಾಗ, ಪೆಟ್ಟಿಗೆಯ ತುಂಬ ಬಂಗಾರವಾಗಿತ್ತು. | “There’s a coin. Buy yourself some puffed rice,” she said. When she opened the chest, it was full of gold. |
| 18 | “ಇದನ್ನೆಲ್ಲಿಂದ ತಂದಿ ? ಯಾರು ಕೊಟ್ಟರು ?” ಎಂದು ಕೇಳಿದನು ಮಲ್ಲೇಶಿ. | “Where did you get this? Who gave it to you?” Malleshi asked. |
| 19 | ಅಜ್ಜಿ ನಡೆದ ಕಥೆಯನ್ನೆಲ್ಲ ಹೇಳಿದಳು. | His grandmother told him everything that had happened. |
| 20 | ಪೆಟ್ಟಿಗೆಯೊಳಗಿನ ಅರ್ಧಬಂಗಾರ ಮಾರಿ, ಬೆಚ್ಚಗಿನ ಮನೆ ಕಟ್ಟಿಸಿದರು. | They sold half the gold in the chest and built a warm house. |
| 21 | ಎತ್ತು ಗಾಡಿ ಕೊಂಡರು. | They bought a bullock cart. |
| 22 | ಮಲ್ಲೇಶಿಯೂ ಒಬ್ಬ ಸಾಹುಕಾರನೇ ಆಗಿ ಕುಳಿತನು, ಆ ಚೆನ್ನೆಪಟ್ಟಣದಲ್ಲಿ. | Malleshi became a wealthy man himself, there in Chennapattana. |
Section 3: Vocabulary
| Kannada (ಕನ್ನಡ) | Transliteration | Part of Speech | English Meaning |
|---|---|---|---|
| ಸಾಹುಕಾರ | saahukaara | noun | wealthy man; here, the man who offers to lend with interest |
| ಪರೀಕ್ಷಿಸಬೇಕೆಂದು | pareekshisabekendu | verb phrase | wanting to test |
| ಭಿಕ್ಷುಕ | bhikshuka | noun | beggar |
| ಕನಿಕರ | kanikara | noun | pity or compassion |
| ಊಟಬಡಿಸಿದಳು | ootabadisidalu | verb | she served a meal |
| ಪುಂಡಿಪಲ್ಲೆ | pundipalle | noun | a dish made with leafy greens |
| ಗಪಗಪನೆ | gapagapane | adverb | in hurried gulps |
| ಮೊಮ್ಮಗನಿಗಾಗಿ | mommaganigaagi | noun with ending | for the grandson |
| ಕೈಗಡ | kaigada | noun | an informal loan |
| ಬಡ್ಡಿ | baddi | noun | interest on a loan |
| ತೆಳ್ಳಗಿನ | tellagina | adjective | thin |
| ಚುರುಮುರಿ | churumuri | noun | puffed rice or a puffed-rice snack |
| ಪೆಟ್ಟಿಗೆ | pettige | noun | box or chest |
| ಬಂಗಾರ | bangaara | noun | gold |
| ಎತ್ತು ಗಾಡಿ | ettu gaadi | noun phrase | bullock cart |
Source: ಆಶೆ ಬಹಳ ಕೆಟ್ಟದು, in ಉತ್ತರ ಕರ್ನಾಟಕದ ಜಾನಪದ ಕಥೆಗಳು, compiled by Simpi Linganna, Department of Kannada and Culture, Government of Karnataka, 2011, pp. 160–161, CC BY-SA 3.0. This excerpt starts when Shiva comes to test the merchant and ends after the grandmother and Malleshi’s fortunes change. The excerpt, English translation and read-along adaptation are shared under CC BY-SA 3.0. The new illustration is separate.




