ಕಥೆಗಳ ಮೂಲಕ ಕನ್ನಡ ಕಲಿಯೋಣ.
Section 1: Kannada Story
ರುಚಿಗಾರ ಸವಿಗಾರ

ಅನಾಥೆಯಾದ ಒಬ್ಬ ಮುದುಕಿಯಿದ್ದಳು ಒಂದೂರಿನಲ್ಲಿ. ಆಕೆಗೆ ಯಾರೂ ಇರಲಿಲ್ಲ. ದಿನಾಲು ರಾಟಿಯ ಮೇಲೆ ನೂಲುವಳು. ಬಂದಷ್ಟರಲ್ಲಿ ಉದರ ನಿರ್ವಾಹ ಸಾಗಿಸುವಳು.
ರಾತ್ರಿ ಸಹ ನಿದ್ರೆ ಬರುವವರೆಗೆ ನೂಲುತ್ತ ಕುಳಿತುಕೊಳ್ಳುವಳು. ಒಂದು ದಿವಸ ರಾತ್ರಿ ಬಹಳ ಹೊತ್ತು ನೂಲುತ್ತ ಕುಳಿತಳು. ಅಂದು ಸೋಮವಾರ. ಆಕೆಗೆ ಉಪೋಶ. ಸಂಜೆಯ ಊಟವಿರಲಿಲ್ಲ. ನೂಲುವದು ಸಾಕಾದ ಬಳಿಕ ರಾಟಿಯನ್ನು ಒತ್ತಟ್ಟಿಗೆ ಸರಿಸಿಟ್ಟು, ಕೈ ಬಾಯಿ ತೊಳೆದುಕೊಂಡು, ನೀರು ಕುಡಿಯುವದಕ್ಕೆ ಅಣಿಯಾದಳು. ಆಕೆಯ ಬಾಯಲ್ಲಿ ಹಲ್ಲು ಇರಲಿಲ್ಲ. ಕಾಳು ನುರಿಸುವದಕ್ಕೆ ಆಗದೆ ಅಬಡು ಜಬಡು ತಿಂದು ನೀರು ಕುಡಿಯುತ್ತ “ಏನು ಹೋದೆವೋ ನನ್ನ ರುಚಿಗಾರ, ನನ್ನ ಸವಿಗಾರ” ಎಂದು ಮೈಮರೆತು ನುಡಿದಳು.
ಆ ಮಾತು ನೆರೆಮನೆಯವರಿಗೆ ಕೇಳಿಸಿತು. - “ಈಕೆ ಯಾರೊಡನೆ ಮಾತಾಡುತ್ತಿದ್ದಾಳೆ? ಅವನೆಂಥ ರುಚಿಗಾರ ಸವಿಗಾರ ಇದ್ದಿರಬಹುದು ಈಕೆಗೆ” ಎಂದು ಸಂದೇಹ ಪಟ್ಟರು.
“ಅಜ್ಜೀ, ನೀನು ಯಾರೊಡನೆ ಮಾತಾಡುತ್ತಿರುವಿ ?” ಎಂಬ ಧ್ವನಿ ನೆರೆಮನೆಯವರಿಂದ ಕೇಳಿ ಬಂತು.
“ನಾನಾರೊಡನೆ ಮಾತಾಡಲೆವ್ವ ! ನನಗಾರಿದ್ದಾರೆ ?”
“ರುಚಿಗಾರ ಸವಿಗಾರ ಅಂದೆಯಲ್ಲ, ಯಾರು ಅವರು ?” ನೆರೆಮನೆಯಿಂದ ಬಂದ ಪ್ರಶ್ನೆ.
“ಇನ್ನೆಲ್ಲಿಯ ರುಚಿಗಾರ, ಇನ್ನೆಲ್ಲಿಯ ಸವಿಗಾರ ! ಹೋಗಿಬಿಟ್ಟು ಬಹಳ ದಿನಗಳಾದವು” ಮುದುಕಿಯ ಮರುನುಡಿ.
“ಹಳೆ ಗೆಳೆತನದ ನೆನಪಾದಂತೆ ತೋರುತ್ತದೆ ಈ ಮುದುಕಿಗೆ” ಎಂದುಕೊಂಡಿದ್ದಾಳೆ ನೆರೆಮನೆಯವಳು. “ಹೋದವರು ಮರಳಿ ಬರಲಾರರು ಅಜ್ಜೀ. ನಾವೂ ಒಮ್ಮೆ ಅದೇ ಹಾದಿಯಲ್ಲಿ ಹೋಗತಕ್ಕವರೇ ಅಲ್ಲವೇ ?” ಎಂದಳು.
“ನಾನು ಹುಚ್ಚಿ ಸತ್ತವರನ್ನು ನೆನೆಯಲಿಲ್ಲ. ಬಿದ್ದು ಹೋದ ಹಲ್ಲುಗಳನ್ನು ನೆನಪಿಸಿಕೊಂಡು ಹಾಗೆ ನುಡಿದೆ - ಏನು ಹೋದೆವೋ ನನ್ನ ರುಚಿಗಾರ - ಸವಿಗಾರ ಎಂದು.” ಮುದುಕಿ ಅರ್ಥವನ್ನು ಸ್ಪಷ್ಟಗೊಳಿಸಿದಳು.
“ಅವುವೇ ಅಜ್ಜೀ ? ನಾನು ಬೇರೆಯೇ ತಿಳಿದಿದ್ದೆನಲ್ಲ !” ಎಂದು ನೆರೆಮನೆಯವಳು ವಿಷಯವನ್ನು ಪೂರ್ತಿಗೊಳಿಸಿದಳು.
Section 2: Sentence-by-Sentence Translation
| No. | Kannada | English |
|---|---|---|
| 1 | ಅನಾಥೆಯಾದ ಒಬ್ಬ ಮುದುಕಿಯಿದ್ದಳು ಒಂದೂರಿನಲ್ಲಿ. | In a village lived an elderly woman who had no one to care for her. |
| 2 | ಆಕೆಗೆ ಯಾರೂ ಇರಲಿಲ್ಲ. | She had nobody of her own. |
| 3 | ದಿನಾಲು ರಾಟಿಯ ಮೇಲೆ ನೂಲುವಳು. | Every day she spun yarn on a spinning wheel. |
| 4 | ಬಂದಷ್ಟರಲ್ಲಿ ಉದರ ನಿರ್ವಾಹ ಸಾಗಿಸುವಳು. | She made a living from whatever she earned. |
| 5 | ರಾತ್ರಿ ಸಹ ನಿದ್ರೆ ಬರುವವರೆಗೆ ನೂಲುತ್ತ ಕುಳಿತುಕೊಳ್ಳುವಳು. | Even at night she would sit spinning until she felt sleepy. |
| 6 | ಒಂದು ದಿವಸ ರಾತ್ರಿ ಬಹಳ ಹೊತ್ತು ನೂಲುತ್ತ ಕುಳಿತಳು. | One night she sat spinning for a long time. |
| 7 | ಅಂದು ಸೋಮವಾರ. | It was a Monday. |
| 8 | ಆಕೆಗೆ ಉಪೋಶ. | She was observing a fast. |
| 9 | ಸಂಜೆಯ ಊಟವಿರಲಿಲ್ಲ. | There was no evening meal. |
| 10 | ನೂಲುವದು ಸಾಕಾದ ಬಳಿಕ ರಾಟಿಯನ್ನು ಒತ್ತಟ್ಟಿಗೆ ಸರಿಸಿಟ್ಟು, ಕೈ ಬಾಯಿ ತೊಳೆದುಕೊಂಡು, ನೀರು ಕುಡಿಯುವದಕ್ಕೆ ಅಣಿಯಾದಳು. | When she had finished spinning, she moved the wheel aside, washed her hands and mouth, and got ready to drink some water. |
| 11 | ಆಕೆಯ ಬಾಯಲ್ಲಿ ಹಲ್ಲು ಇರಲಿಲ್ಲ. | She had no teeth in her mouth. |
| 12 | ಕಾಳು ನುರಿಸುವದಕ್ಕೆ ಆಗದೆ ಅಬಡು ಜಬಡು ತಿಂದು ನೀರು ಕುಡಿಯುತ್ತ “ಏನು ಹೋದೆವೋ ನನ್ನ ರುಚಿಗಾರ, ನನ್ನ ಸವಿಗಾರ” ಎಂದು ಮೈಮರೆತು ನುಡಿದಳು. | Unable to grind the grains with her teeth, she ate awkwardly; as she drank water, she said absent-mindedly, “Oh, why did you leave me, my Taste, my Savour?” |
| 13 | ಆ ಮಾತು ನೆರೆಮನೆಯವರಿಗೆ ಕೇಳಿಸಿತು. | The neighbours heard those words. |
| 14 | - “ಈಕೆ ಯಾರೊಡನೆ ಮಾತಾಡುತ್ತಿದ್ದಾಳೆ? | “Who is she talking to? |
| 15 | ಅವನೆಂಥ ರುಚಿಗಾರ ಸವಿಗಾರ ಇದ್ದಿರಬಹುದು ಈಕೆಗೆ” ಎಂದು ಸಂದೇಹ ಪಟ್ಟರು. | Who could this ‘Taste and Savour’ of hers be?” they wondered. |
| 16 | “ಅಜ್ಜೀ, ನೀನು ಯಾರೊಡನೆ ಮಾತಾಡುತ್ತಿರುವಿ ?” ಎಂಬ ಧ್ವನಿ ನೆರೆಮನೆಯವರಿಂದ ಕೇಳಿ ಬಂತು. | “Granny, who are you talking to?” came a voice from next door. |
| 17 | “ನಾನಾರೊಡನೆ ಮಾತಾಡಲೆವ್ವ ! ನನಗಾರಿದ್ದಾರೆ ?” | “Who would I talk to, dear? Who do I have?” |
| 18 | “ರುಚಿಗಾರ ಸವಿಗಾರ ಅಂದೆಯಲ್ಲ, ಯಾರು ಅವರು ?” ನೆರೆಮನೆಯಿಂದ ಬಂದ ಪ್ರಶ್ನೆ. | “You said ‘Taste and Savour’. Who are they?” came the question from next door. |
| 19 | “ಇನ್ನೆಲ್ಲಿಯ ರುಚಿಗಾರ, ಇನ್ನೆಲ್ಲಿಯ ಸವಿಗಾರ ! ಹೋಗಿಬಿಟ್ಟು ಬಹಳ ದಿನಗಳಾದವು” ಮುದುಕಿಯ ಮರುನುಡಿ. | “Where is Taste now, and where is Savour? They went away long ago,” replied the old woman. |
| 20 | “ಹಳೆ ಗೆಳೆತನದ ನೆನಪಾದಂತೆ ತೋರುತ್ತದೆ ಈ ಮುದುಕಿಗೆ” ಎಂದುಕೊಂಡಿದ್ದಾಳೆ ನೆರೆಮನೆಯವಳು. | “It seems the old woman is remembering an old friendship,” thought the neighbour. |
| 21 | “ಹೋದವರು ಮರಳಿ ಬರಲಾರರು ಅಜ್ಜೀ. | “Those who have gone cannot come back, Granny. |
| 22 | ನಾವೂ ಒಮ್ಮೆ ಅದೇ ಹಾದಿಯಲ್ಲಿ ಹೋಗತಕ್ಕವರೇ ಅಲ್ಲವೇ ?” ಎಂದಳು. | One day we too must go the same way, mustn’t we?” she said. |
| 23 | “ನಾನು ಹುಚ್ಚಿ ಸತ್ತವರನ್ನು ನೆನೆಯಲಿಲ್ಲ. | “Silly woman, I wasn’t remembering the dead. |
| 24 | ಬಿದ್ದು ಹೋದ ಹಲ್ಲುಗಳನ್ನು ನೆನಪಿಸಿಕೊಂಡು ಹಾಗೆ ನುಡಿದೆ - ಏನು ಹೋದೆವೋ ನನ್ನ ರುಚಿಗಾರ - ಸವಿಗಾರ ಎಂದು.” | I was thinking of my teeth that had fallen out when I said, ‘Oh, why did you leave me, my Taste and Savour?’” |
| 25 | ಮುದುಕಿ ಅರ್ಥವನ್ನು ಸ್ಪಷ್ಟಗೊಳಿಸಿದಳು. | The old woman made her meaning clear. |
| 26 | “ಅವುವೇ ಅಜ್ಜೀ ? ನಾನು ಬೇರೆಯೇ ತಿಳಿದಿದ್ದೆನಲ್ಲ !” ಎಂದು ನೆರೆಮನೆಯವಳು ವಿಷಯವನ್ನು ಪೂರ್ತಿಗೊಳಿಸಿದಳು. | “Oh, those, Granny? I had understood something quite different!” said the neighbour, bringing the conversation to an end. |
Section 3: Vocabulary
| Kannada | English letters | English meaning | Part of speech |
|---|---|---|---|
| ಮುದುಕಿ | muduki | elderly woman | Noun |
| ದಿನಾಲು | dinaalu | every day | Adverb |
| ರಾಟಿ | raati | spinning wheel | Noun |
| ನೂಲುವಳು | nooluvalu | she spins yarn | Verb |
| ಉದರ ನಿರ್ವಾಹ | udara nirvaaha | making a living | Noun phrase |
| ನಿದ್ರೆ | nidre | sleep | Noun |
| ಸೋಮವಾರ | somavaara | Monday | Noun |
| ಉಪೋಶ | uposha | fast; fasting (regional form) | Noun |
| ಸಂಜೆ | sanje | evening | Noun |
| ನೀರು | neeru | water | Noun |
| ಹಲ್ಲು | hallu | tooth | Noun |
| ಕಾಳು | kaalu | grain | Noun |
| ಮೈಮರೆತು | maimaretu | absent-mindedly | Adverb |
| ನೆರೆಮನೆ | neremane | neighbouring house | Noun |
| ಸಂದೇಹ | sandeha | doubt; uncertainty | Noun |
| ಧ್ವನಿ | dhvani | voice; sound | Noun |
| ಪ್ರಶ್ನೆ | prashne | question | Noun |
| ಮರುನುಡಿ | marunudi | reply | Noun |
| ಗೆಳೆತನ | geletana | friendship | Noun |
| ಹಾದಿ | haadi | path; way | Noun |
| ಅರ್ಥ | artha | meaning | Noun |
| ಸ್ಪಷ್ಟಗೊಳಿಸಿದಳು | spashtagolisidalu | she clarified | Verb |
Source: “ರುಚಿಗಾರ ಸವಿಗಾರ,” in ಉತ್ತರ ಕರ್ನಾಟಕದ ಜನಪದ ಕಥೆಗಳು, compiled by Simpi Linganna, Government of Karnataka, Department of Kannada and Culture, 2011, pp. 111–112. Edition rights: Government of Karnataka. Source text is CC BY-SA 3.0; LangFastPro’s English translation, Roman reading aid and narrated adaptation use the same licence. Regional wording is preserved; line wrapping is removed and dialogue quotation marks are regularized. The illustration is independently generated.




