ಹುರಮುಂಜಗೇಡಿ — What Did Bandevva Need?

LangFastPro Editorial Team's avatar
Lesson prepared byLangFastPro Editorial Team
More

ಕಥೆಗಳ ಮೂಲಕ ಕನ್ನಡ ಕಲಿಯೋಣ.

Section 1: Kannada Story

ಹುರಮುಂಜಗೇಡಿ — What Did Bandevva Need?

At a village grocer, Bandevva watches the shopkeeper tie a small pouch of ochre beside a balance scale.

Listen to the story0:00 / 0:00

ಹಳ್ಳಿಯಲ್ಲಿ ಚಿಕ್ಕ ತಕ್ಕಡಿ ಅಂಗಡಿ ಒಂದು. ಬೆಲ್ಲ - ಎಣ್ಣೆ, ಇಂಗು - ಜೀರಿಗೆ, ಚುರಮರಿ - ಪುಠಾಣಿ ಮಾರುವ ಕಿರಾಣಿ ಅಂಗಡಿ. ಹಳ್ಳಿಯೊಳಗಿನ ಗಿರಾಕಿಗಳು ಉಡಿಯಲ್ಲಿ ಜೋಳವನ್ನೋ ಕುಸುಬೆಯನ್ನೋ ತಂದು ಅಂಗಡಿಕಾರನ ಮಾಷಿನಲ್ಲಿ ಅಳೆದುಹಾಕಿ ತಮಗೆ ಬೇಕಾದ ಸಾಮಾನು ಕೊಂಡುಕೊಳ್ಳುವುದು ವಾಡಿಕೆ. ದುಡ್ಡು ತಂದು ವ್ಯಾಪಾರ ಮಾಡಿಕೊಳ್ಳುವವರು ಬಹಳ ಕಡಿಮೆ.

ಹಬ್ಬ ಹುಣ್ಣಿಮೆ ದಿವಸ ಇಲ್ಲವೆ ಸೋಮವಾರ ದಿವಸ ಗಿರಾಕಿಗಳ ಗೊಂದಲ ಹೆಚ್ಚಿಗಿರುತ್ತದೆ. ಸರತಿಯ ಮೇಲೆ ಗಿರಾಕಿಗಳು ವ್ಯಾಪಾರ ಗಿಟ್ಟಿಸಬೇಕಾಗುತ್ತದೆ. ಒಂದು ಸಾರೆ ಗೌಡರ ಮನೆಯಲ್ಲಿ ತೊತ್ತಗೆಲಸಮಾಡುವ ಬಂಡೆವ್ವ ಮುದಿಕೆ ಉಡಿಯಲ್ಲಿ ಜೋಳ ಕಟ್ಟಿಕೊಂಡು ಬಂದು ಸರತಿ ಕಾಯುತ್ತ ನಿಂತೇ ನಿಂತಳು. ಮುಂದಿನ ಗಿರಾಕಿಗಳು ಹೊರಟು ಹೋದ ಬಳಿಕ, ಮುದಿಕೆ ತನ್ನ ಉಡಿಯೊಳಗಿನ ಜೋಳವನ್ನು ಅಳೆದು ಹಾಕಿದಳು.

“ಏನು ಕೊಡಲಿ” ಎಂದನು ಅಂಗಡಿಕಾರ.

“ಗೌಡತಿ ಏನೋ ಹೇಳಿದ್ದಾಳೆರೀ” ಎಂದು ನೆನಪು ಮಾಡಿಕೊಳ್ಳಹತ್ತಿದಳು.

“ಅಲ್ಲ” ಮುದಿಕೆಯ ಸೊಲ್ಲು.

“ಇಂಗು ಜೀರಿಗೆ ?”

“ಅದು ಅಲ್ಲ.”

“ಶುಂಠಿ, ಮೆಣಸು ?”

“ಊಂ! ಹು !”

“ಅಡಿಕೆ, ಕಾಚು ?”

ಅಲ್ಲವೆನ್ನುವಂತೆ ಮುದಿಕೆ ಗೋಣುಕೊಡಹಿದಳು. ಅಂಗಡಿಕಾರನಿಗೆ ಬೇಸರಾಯಿತು. ಹಿಂದೆ ನಿಂತ ಗಿರಾಕಿಗಳು ಅವಸರ ಮಾಡತೊಡಗಿದ್ದನ್ನು ಕಂಡು ಸಿಟ್ಟಿನಿಂದ ಆ ಮುದಿಕೆಗೆ “ಕೇಳಿದ್ದಕ್ಕೆಲ್ಲ ಅಲ್ಲವೆನ್ನುತ್ತ ಮತ್ತೇಕೆ ನಿಂತೆ ? ನಿನ್ನ ಜೋಳ ತೆಗೆದುಕೊಂಡು ಹೋಗು, ಹುರಮುಂಜಗೇಡೀ” ಎಂದು ಗದ್ದರಿಸುವಷ್ಟರಲ್ಲಿ - “ಅದೇ ನೋಡೋ ಅಪ್ಪಾ, ನನಗೆ ಬೇಕಾಗಿದ್ದು ಹುರಮುಂಜ. ಕೊಟ್ಟುಬಿಡು ನನ್ನಪ್ಪಾ, ಹೋಗುತ್ತೇನೆ. ಗೌಡತಿಬಯ್ಯಾಳು ಬಹಳ ಹೊತ್ತಾಯ್ತು” ಎಂದು ಮುದಿಕೆ ನುಡಿಯಲು, ಅಂಗಡಿಕಾರನು ಕಾಗದದಲ್ಲಿ ಹುರಮುಂಜ ಪೊಟ್ಟಣ ಕಟ್ಟಿಕೊಟ್ಟನು.

Section 2: Sentence-by-Sentence Translation

#KannadaEnglish
1ಹಳ್ಳಿಯಲ್ಲಿ ಚಿಕ್ಕ ತಕ್ಕಡಿ ಅಂಗಡಿ ಒಂದು.There was a small shop with a balance scale in the village.
2ಬೆಲ್ಲ - ಎಣ್ಣೆ, ಇಂಗು - ಜೀರಿಗೆ, ಚುರಮರಿ - ಪುಠಾಣಿ ಮಾರುವ ಕಿರಾಣಿ ಅಂಗಡಿ.It was a grocery shop that sold jaggery and oil, asafoetida and cumin, puffed rice and roasted gram.
3ಹಳ್ಳಿಯೊಳಗಿನ ಗಿರಾಕಿಗಳು ಉಡಿಯಲ್ಲಿ ಜೋಳವನ್ನೋ ಕುಸುಬೆಯನ್ನೋ ತಂದು ಅಂಗಡಿಕಾರನ ಮಾಷಿನಲ್ಲಿ ಅಳೆದುಹಾಕಿ ತಮಗೆ ಬೇಕಾದ ಸಾಮಾನು ಕೊಂಡುಕೊಳ್ಳುವುದು ವಾಡಿಕೆ.The villagers usually brought sorghum or safflower seeds in the folds of their clothes, poured it into the shopkeeper’s measure, and bought what they needed.
4ದುಡ್ಡು ತಂದು ವ್ಯಾಪಾರ ಮಾಡಿಕೊಳ್ಳುವವರು ಬಹಳ ಕಡಿಮೆ.Very few brought money to pay.
5ಹಬ್ಬ ಹುಣ್ಣಿಮೆ ದಿವಸ ಇಲ್ಲವೆ ಸೋಮವಾರ ದಿವಸ ಗಿರಾಕಿಗಳ ಗೊಂದಲ ಹೆಚ್ಚಿಗಿರುತ್ತದೆ.The shop got busier on festivals, full-moon days, or Mondays.
6ಸರತಿಯ ಮೇಲೆ ಗಿರಾಕಿಗಳು ವ್ಯಾಪಾರ ಗಿಟ್ಟಿಸಬೇಕಾಗುತ್ತದೆ.Customers had to wait their turn to buy things.
7ಒಂದು ಸಾರೆ ಗೌಡರ ಮನೆಯಲ್ಲಿ ತೊತ್ತಗೆಲಸಮಾಡುವ ಬಂಡೆವ್ವ ಮುದಿಕೆ ಉಡಿಯಲ್ಲಿ ಜೋಳ ಕಟ್ಟಿಕೊಂಡು ಬಂದು ಸರತಿ ಕಾಯುತ್ತ ನಿಂತೇ ನಿಂತಳು.One day Bandevva, an older woman who worked in the Gowda household, tied some sorghum in a fold of her clothing, came to the shop, and waited and waited.
8ಮುಂದಿನ ಗಿರಾಕಿಗಳು ಹೊರಟು ಹೋದ ಬಳಿಕ, ಮುದಿಕೆ ತನ್ನ ಉಡಿಯೊಳಗಿನ ಜೋಳವನ್ನು ಅಳೆದು ಹಾಕಿದಳು.When the customers ahead of her left, she emptied the sorghum from the fold into the measure.
9“ಏನು ಕೊಡಲಿ” ಎಂದನು ಅಂಗಡಿಕಾರ.“What can I get you?” asked the shopkeeper.
10“ಗೌಡತಿ ಏನೋ ಹೇಳಿದ್ದಾಳೆರೀ” ಎಂದು ನೆನಪು ಮಾಡಿಕೊಳ್ಳಹತ್ತಿದಳು.“The lady of the house asked me for something,” she said, trying to remember.
11“ಅಲ್ಲ” ಮುದಿಕೆಯ ಸೊಲ್ಲು.“No,” said the older woman.
12“ಇಂಗು ಜೀರಿಗೆ ?”“Asafoetida? Cumin?”
13“ಅದು ಅಲ್ಲ.”“Not that.”
14“ಶುಂಠಿ, ಮೆಣಸು ?”“Ginger? Pepper?”
15“ಊಂ! ಹು !”“Mm-mm!”
16“ಅಡಿಕೆ, ಕಾಚು ?”“Areca nut? Catechu?”
17ಅಲ್ಲವೆನ್ನುವಂತೆ ಮುದಿಕೆ ಗೋಣುಕೊಡಹಿದಳು.The older woman shook her head.
18ಅಂಗಡಿಕಾರನಿಗೆ ಬೇಸರಾಯಿತು.The shopkeeper was getting fed up.
19ಹಿಂದೆ ನಿಂತ ಗಿರಾಕಿಗಳು ಅವಸರ ಮಾಡತೊಡಗಿದ್ದನ್ನು ಕಂಡು ಸಿಟ್ಟಿನಿಂದ ಆ ಮುದಿಕೆಗೆ “ಕೇಳಿದ್ದಕ್ಕೆಲ್ಲ ಅಲ್ಲವೆನ್ನುತ್ತ ಮತ್ತೇಕೆ ನಿಂತೆ ?Seeing the customers behind her getting impatient, he snapped at her, “Why are you still standing here if you keep saying no to everything I suggest?
20ನಿನ್ನ ಜೋಳ ತೆಗೆದುಕೊಂಡು ಹೋಗು, ಹುರಮುಂಜಗೇಡೀ” ಎಂದು ಗದ್ದರಿಸುವಷ್ಟರಲ್ಲಿ -Take your sorghum and go, you ochre fool!” Just as he was bawling at her,
21“ಅದೇ ನೋಡೋ ಅಪ್ಪಾ, ನನಗೆ ಬೇಕಾಗಿದ್ದು ಹುರಮುಂಜ.she said, “That’s it, my dear! It was ochre I needed.
22ಕೊಟ್ಟುಬಿಡು ನನ್ನಪ್ಪಾ, ಹೋಗುತ್ತೇನೆ.Give me some, dear, and I’ll be on my way.
23ಗೌಡತಿಬಯ್ಯಾಳು ಬಹಳ ಹೊತ್ತಾಯ್ತು” ಎಂದು ಮುದಿಕೆ ನುಡಿಯಲು, ಅಂಗಡಿಕಾರನು ಕಾಗದದಲ್ಲಿ ಹುರಮುಂಜ ಪೊಟ್ಟಣ ಕಟ್ಟಿಕೊಟ್ಟನು.It’s very late. The lady will scold me.” The shopkeeper wrapped some ochre in paper and handed it to her.

Section 3: Vocabulary

ಕೆಲವು ಪದಗಳನ್ನು ಮೂಲರೂಪದಲ್ಲಿ ಕೊಟ್ಟಿದ್ದೇವೆ. Some words are listed in their base form.

KannadaTransliterationPart of SpeechEnglish Meaning
ತಕ್ಕಡಿtakkadinounbalance scale
ಬೆಲ್ಲbellanounjaggery
ಇಂಗುingunounasafoetida
ಜೀರಿಗೆjeerigenouncumin
ಚುರಮರಿchuramarinounpuffed rice
ಪುಠಾಣಿputhaaninounroasted gram
ಕಿರಾಣಿ ಅಂಗಡಿkiraani angadinoun phrasegrocery shop
ಗಿರಾಕಿgiraakinouncustomer
ಉಡಿudinounfold of clothing used to carry something
ಜೋಳjolanounsorghum
ಕುಸುಬೆkusubenounsafflower; the seeds in this story
ಅಳೆaleverbmeasure
ವಾಡಿಕೆvaadikenouncustom; usual practice
ಹುಣ್ಣಿಮೆhunnimenounfull moon; the full-moon day here
ಸರತಿsaratinounturn; place in line
ಶುಂಠಿshunthinounginger
ಮೆಣಸುmenasunounpepper
ಅಡಿಕೆadikenounareca nut
ಕಾಚುkaachunouncatechu, a dark extract sometimes used with areca nut
ಅವಸರavasaranounhurry
ಹುರಮುಂಜhuramunjanounochre; a yellowish or reddish-brown earth pigment
ಪೊಟ್ಟಣpottananounsmall packet

Source: ಹುರಮುಂಜಗೇಡಿ, collected by Simpi Linganna in Uttara Karnatakada Janapada Kathegalu, pp. 190–191 (Department of Kannada and Culture, Government of Karnataka, 2011). The Kannada transcription, LangFastPro’s English translation and Roman reading aid, and Kannada narration are shared under CC BY-SA 3.0.

Related lessons