ಸೇವಕನ ಸಂಬಳವೇಕೆ ಕಡಿಮೆ ? — Why Is the Servant’s Pay Lower?

LangFastPro Editorial Team's avatar
Lesson prepared byLangFastPro Editorial Team
More

ಕಥೆಗಳ ಮೂಲಕ ಕನ್ನಡ ಕಲಿಯೋಣ.

Section 1: Kannada Story

ಸೇವಕನ ಸಂಬಳವೇಕೆ ಕಡಿಮೆ ? — Why Is the Servant’s Pay Lower?

A king listens to his minister under a riverside tree, with an attendant beside them and performers across the water.

Listen to the story0:00 / 0:00

ಒಂದೂರಿನಲ್ಲಿ ಒಬ್ಬ ರಾಜ, ಅವನಿಗೊಬ್ಬ ಪ್ರಧಾನಿ ಹಾಗೂ ಒಬ್ಬ ಸೇವಕ ಇದ್ದರು. ಸೇವಕನು ತನ್ನನ್ನು ಪ್ರಧಾನಿಯೊಡನೆ ಹೋಲಿಸಿಕೊಂಡು ಹಲವು ಬಗೆಯಾಗಿ ಚಿಂತಿಸುತ್ತಿದ್ದನು - “ತನ್ನ ಸಂಬಳ ಹತ್ತೆಂಟು ರೂಪಾಯಿ ಮಾತ್ರ. ಪ್ರಧಾನಿಯ ಸಂಬಳ ಬೊಗಸೆ ಬೊಗಸೆ. ತನ್ನ ಕೆಲಸ ಓಡಾಟದ್ದು, ಪ್ರಧಾನಿಯದು ಸ್ವಸ್ಥ ಕುಳಿತುಕೊಳ್ಳುವದು. ಈ ಭೇದಭಾವವೇಕೆ ?”

ರಾಜನನ್ನು ಕೇಳಿಯೇಬಿಟ್ಟನು ಸೇವಕನು - “ಹಗುರು ಕೆಲಸಮಾಡುವ ಪ್ರಧಾನಿಯ ಸಂಬಳ ಲೆಕ್ಕ ತಪ್ಪಿ; ಶ್ರಮದ ಕೆಲಸಮಾಡುವ ನನ್ನ ಸಂಬಳ ಹತ್ತೆಂಟು ಟಿಗಳಿ. ಹೀಗೇಕೆ ?”

“ನಿನ್ನ ಕೆಲಸ ಶ್ರಮದ್ದು. ಪ್ರಧಾನಿಯ ಕೆಲಸ ಹಗುರು. ಆದರೂ ಅಷ್ಟು ಸಂಬಳ ಅವನಿಗೆ ಕೊಡಲೇಬೇಕಾಗುತ್ತದೆ. ಶ್ರಮದ ಕೆಲಸವಾದರೂ ನಿನ್ನ ಸಂಬಳ ಕಡಿಮೆ ಅಲ್ಲ. ಆದರೂ ನಿನಗೆ ಅಸಮಾಧಾನವೆನಿಸುತ್ತಿದ್ದರೆ ಇನ್ನೂ ನಾಲ್ಕು ರೂಪಾಯಿ ಹೆಚ್ಚಿಗೆ ಕೊಡಿಸುತ್ತೇನೆ. ಆಯಿತೇ” ಎಂದನು ರಾಜ.

ಸೇವಕನ ತಲೆಯೊಳಗಿನ ಗುಂಗೇ ಇಳಿಯಲೊಲ್ಲದು. ಅಷ್ಟು ದೊಡ್ಡ ಸಂಬಳ ಪ್ರಧಾನಿಗೇಕೆ ?

ರಾಜನು ಒಂದು ದಿನ ಬೇಟೆಗೆ ಹೊರಟನು. ಜೊತೆಗೆ ಪ್ರಧಾನಿ ಹಾಗೂ ಸೇವಕ ಇರತಕ್ಕವರೇ. ಬೇಟೆಯನ್ನರಸುತ್ತ ಹೋದೇ ಹೋದರು. ಒಂದು ಹೊಳೆ ಕಾಣಿಸಿತು. ಕೈಕಾಲು ತೊಳಕೊಂಡು ಹೊಳೆಯ ದಂಡೆಯಲ್ಲಿರುವ ಒಂದು ಮರದ ನೆರಳಿಗೆ ಕುಳಿತು ಕೊಂಡರು.

ಹೊಳೆಯ ಆಚೆಯಲ್ಲಿ ಜನರ ಗುಂಪು ಕೂಡಿದಂತೆ ಕಾಣಿಸಲು, ರಾಜನಲ್ಲಿ ಕುತೂಹಲ ಹುಟ್ಟಿತು. ಸೇವಕನಿಗೆ ಹೇಳಿದನು - “ಆಚೆಯ ದಡಕ್ಕೆ ಹೋಗಿ ಅವರಾರು, ತಿಳಕೊಂಡು ಬಾ.”

ಸೇವಕನು ಹೊಳೆದಾಟಿ ಆಚೆಯ ತೀರವನ್ನು ಸೇರಿ, ಆ ಜನರ ಗುಂಪಿನ ಬಳಿ ಹೋಗಿ ಮಾತನಾಡಿಸಿ ಬಂದು ರಾಜನಿಗೆ ಹೇಳಿದನು - “ಅವರು ವೇಷಗಾರರಂತೆ.”

“ಅವರ ಊರು ಯಾವುದಂತೆ ?” ರಾಜ ಕೇಳಿದನು.

“ಅದನ್ನು ಕೇಳಲಿಲ್ಲ ದೊರೆಗಳೇ, ಓಡುತ್ತ ಹೋಗಿ ಕೇಳಿಕೊಂಡು ಬರುವೆ” ಎಂದವನೇ ಅತ್ತ ಓಡಿದನು ಸೇವಕ. ಮರಳಿ ಬಂದ ರಾಜನಿಗೆ ತಿಳಿಸಿದನು - “ಅವರು ಶ್ರೀಶೈಲ ಕಡೆಯವರಂತೆ.”

“ಹೀಗೋ ? ಇಲ್ಲಿ ಇನ್ನೂ ಎಷ್ಟು ದಿವಸ ಇರುವರಂತೆ ?” ರಾಜನ ಪ್ರಶ್ನೆ. ಅದನ್ನು ಕೇಳುವದಕ್ಕೆ ಸೇವಕನು ಮತ್ತೆ ಹೊಳೆದಾಟಿದನು. ಇನ್ನೂ ನಾಲ್ಕಾರುದಿನ ಇಲ್ಲಿಯೇ ಇರುವರಂಬ ಸಮಾಚಾರ ತಂದನು.

“ನಮ್ಮ ಊರಿಗೆ ಬರುವರೇ ?” ಮತ್ತೊಂದು ಪ್ರಶ್ನೆ ರಾಜನದು. ಅದನ್ನು ತಿಳಿಯಲು ಸೇವಕನು ಹೋಗಿ ಬಂದನು. “ರಾಜನ ಅಪ್ಪಣೆಯಾದರೆ ಬರುವರಂತೆ” ಎಂದು ಸೇವಕನು ಬಿನ್ನಯಿಸಿದನು.

“ಅವರು ಯಾವ ಸೋಗು ಹಾಕುತ್ತಾರೆ ? ಅವರು ಅಪೇಕ್ಷಿಸುವ ಪ್ರತಿಫಲ ಎಂಥದು ? ನಮ್ಮ ರಾಜಧಾನಿಯಲ್ಲಿಯೇ ಅವರು ನೆಲಸಬೇಕಾದರೆ ನಾವು ಯಾವ ಸೌಕರ್ಯ ಒದಗಿಸಬೇಕು ?” - ಮೊದಲಾದ ಸಂಗತಿಗಳನ್ನು ತಿಳಕೊಳ್ಳುವ ಸಲುವಾಗಿ ಸೇವಕನು ಹಲವು ಸಾರೆ ಓಡಾಡಬೇಕಾಯಿತು. ಆತನು ದಣಿದುಹೋದನೇ ಹೊರತು ರಾಜನಿಗೆ ಬೇಕಾದ ಸಂಪೂರ್ಣ ಮಾಹಿತಿ ತರಲಿಲ್ಲ.

ಪ್ರಧಾನಿಯನ್ನು ಕರೆಯಿಸಿ ರಾಜನು ಹೇಳಿದನು - “ಹೊಳೆಯಾಚೆಗೆ ಕಾಣಿಸುವ ಗುಂಪು ಏತಕ್ಕಾಗಿ ನೆರೆದಿದೆ ? ಅವರಾರು ? ಅವರ ಉದ್ದೇಶವೇನು, ತಿಳಕೊಂಡು ಬರಬೇಕು.”

“ಆಗಲಿ ದೊರೆಗಳೇ” ಎಂದು ವಂದಿಸಿ ಪ್ರಧಾನಿಯು ಹೊಳೆಯಾಚೆಗಿನ ತೀರಕ್ಕೆ ತೆರಳಿದನು. ಒಂದೆರಡು ಗಳಿಗೆಯಲ್ಲಿ ಬಂದು ತಾನು ತಂದ ಸಮಾಚಾರವನ್ನೆಲ್ಲ ರಾಜನಿಗೆ ಬಿನ್ನಯಿಸಿದನು -

“ಅವರು ಶ್ರೀಶೈಲಕಡೆಯವರು. ವೇಷಗಾರರು. ಹೆಣ್ಣು ಗಂಡು ಕೂಡಿ ಹನ್ನೊಂದು ಜನರಿದ್ದಾರೆ. ಈ ಊರಲ್ಲಿ ನಾಲ್ಕಾರು ದಿನವಿದ್ದು ಮುಂದಿನೂರಿಗೆ ಹೊರಡುವದರಲ್ಲಿದ್ದರು. ನಮ್ಮೂರಿಗೆ ಬರಲು ತಿಳಿಸಿದ್ದೇನೆ. ದಶಾವತಾರಗಳ ಸೋಗು ಹಾಕುವರಂತೆ. ನಾಲ್ಕು ಕೂರಿಗೆ ಹೊಲ, ಹನ್ನೆರಡು ಅಂಕಣದ ಮನೆ ಕೊಟ್ಟರೆ, ನಮ್ಮೂರವರಾಗಿಯೇ ಉಳಿಯುತ್ತೇವೆಂದು ಹೇಳಿದರು. ಅಪ್ಪಣೆಯಾದರೆ ಈಗಲೇ ಬಂದು ದೊರೆಗಳನ್ನು ಕಾಣುವರಂತೆ.

ಪ್ರಧಾನಿಯು ಒದಗಿಸಿದ ಸಂಗತಿಗಳನ್ನು ಕೇಳಿಕೊಂಡ ಬಳಿಕ, ರಾಜನಿಗೆ ಹೆಚ್ಚು ತಿಳಕೊಳ್ಳುವ ಅಗತ್ಯವೇ ಉಳಿಯಲಿಲ್ಲ. ಸೇವಕನನ್ನು ಕರೆದು ರಾಜನು ಹೇಳಿದನು -

“ನೋಡಿದೆಯಾ ? ನೀನು ಹತ್ತೆಂಟು ಸಾರೆ ಎಡತಾಕಿ ಮಾಹಿತಿ ತಂದರೂ ಅಪೂರ್ಣವಾಗಿಯೇ ಉಳಿಯಿತು. ಪ್ರಧಾನಿಯು ಒಂದೇ ಸಾರೆ ಹೋಗಿ ಬಂದರೆ, ಯಾವ ಸಂಗತಿಯನ್ನೂ ಉಳಿಸಿಕೊಂಡು ಬರಲಿಲ್ಲ. ಅದಕ್ಕಾಗಿಯೇ ಆತನ ಸಂಬಳ ಅಷ್ಟು, ನಿನ್ನ ಸಂಬಳ ಇಷ್ಟೇ.

Section 2: Sentence-by-Sentence Translation

#Kannada (ಕನ್ನಡ)English Translation
1ಒಂದೂರಿನಲ್ಲಿ ಒಬ್ಬ ರಾಜ, ಅವನಿಗೊಬ್ಬ ಪ್ರಧಾನಿ ಹಾಗೂ ಒಬ್ಬ ಸೇವಕ ಇದ್ದರು.In a town there lived a king, his minister and a servant.
2ಸೇವಕನು ತನ್ನನ್ನು ಪ್ರಧಾನಿಯೊಡನೆ ಹೋಲಿಸಿಕೊಂಡು ಹಲವು ಬಗೆಯಾಗಿ ಚಿಂತಿಸುತ್ತಿದ್ದನು - “ತನ್ನ ಸಂಬಳ ಹತ್ತೆಂಟು ರೂಪಾಯಿ ಮಾತ್ರ.The servant compared himself with the minister and kept thinking: “My pay is only a few rupees.
3ಪ್ರಧಾನಿಯ ಸಂಬಳ ಬೊಗಸೆ ಬೊಗಸೆ.The minister gets handful after handful.
4ತನ್ನ ಕೆಲಸ ಓಡಾಟದ್ದು, ಪ್ರಧಾನಿಯದು ಸ್ವಸ್ಥ ಕುಳಿತುಕೊಳ್ಳುವದು.My work involves running about; the minister’s involves sitting comfortably.
5ಈ ಭೇದಭಾವವೇಕೆ ?”Why this unequal treatment?”
6ರಾಜನನ್ನು ಕೇಳಿಯೇಬಿಟ್ಟನು ಸೇವಕನು - “ಹಗುರು ಕೆಲಸಮಾಡುವ ಪ್ರಧಾನಿಯ ಸಂಬಳ ಲೆಕ್ಕ ತಪ್ಪಿ; ಶ್ರಮದ ಕೆಲಸಮಾಡುವ ನನ್ನ ಸಂಬಳ ಹತ್ತೆಂಟು ಟಿಗಳಿ.The servant asked the king outright: “The minister does light work and earns more than one can count; I do strenuous work and earn only a few coins.
7ಹೀಗೇಕೆ ?”Why is that?”
8“ನಿನ್ನ ಕೆಲಸ ಶ್ರಮದ್ದು.“Your work is strenuous.
9ಪ್ರಧಾನಿಯ ಕೆಲಸ ಹಗುರು.The minister’s work is light.
10ಆದರೂ ಅಷ್ಟು ಸಂಬಳ ಅವನಿಗೆ ಕೊಡಲೇಬೇಕಾಗುತ್ತದೆ.Even so, he has to be paid that much.
11ಶ್ರಮದ ಕೆಲಸವಾದರೂ ನಿನ್ನ ಸಂಬಳ ಕಡಿಮೆ ಅಲ್ಲ.Although your work is strenuous, your pay is not low.
12ಆದರೂ ನಿನಗೆ ಅಸಮಾಧಾನವೆನಿಸುತ್ತಿದ್ದರೆ ಇನ್ನೂ ನಾಲ್ಕು ರೂಪಾಯಿ ಹೆಚ್ಚಿಗೆ ಕೊಡಿಸುತ್ತೇನೆ.Still, if you feel dissatisfied, I will have you paid four rupees more.
13ಆಯಿತೇ” ಎಂದನು ರಾಜ.All right?” said the king.
14ಸೇವಕನ ತಲೆಯೊಳಗಿನ ಗುಂಗೇ ಇಳಿಯಲೊಲ್ಲದು.The thought would not leave the servant’s mind.
15ಅಷ್ಟು ದೊಡ್ಡ ಸಂಬಳ ಪ್ರಧಾನಿಗೇಕೆ ?Why should the minister receive such a large salary?
16ರಾಜನು ಒಂದು ದಿನ ಬೇಟೆಗೆ ಹೊರಟನು.One day the king went hunting.
17ಜೊತೆಗೆ ಪ್ರಧಾನಿ ಹಾಗೂ ಸೇವಕ ಇರತಕ್ಕವರೇ.The minister and servant naturally accompanied him.
18ಬೇಟೆಯನ್ನರಸುತ್ತ ಹೋದೇ ಹೋದರು.They went farther and farther in search of game.
19ಒಂದು ಹೊಳೆ ಕಾಣಿಸಿತು.A river came into view.
20ಕೈಕಾಲು ತೊಳಕೊಂಡು ಹೊಳೆಯ ದಂಡೆಯಲ್ಲಿರುವ ಒಂದು ಮರದ ನೆರಳಿಗೆ ಕುಳಿತು ಕೊಂಡರು.They washed their hands and feet and sat in the shade of a tree on the riverbank.
21ಹೊಳೆಯ ಆಚೆಯಲ್ಲಿ ಜನರ ಗುಂಪು ಕೂಡಿದಂತೆ ಕಾಣಿಸಲು, ರಾಜನಲ್ಲಿ ಕುತೂಹಲ ಹುಟ್ಟಿತು.Seeing what looked like a group of people gathered across the river, the king grew curious.
22ಸೇವಕನಿಗೆ ಹೇಳಿದನು - “ಆಚೆಯ ದಡಕ್ಕೆ ಹೋಗಿ ಅವರಾರು, ತಿಳಕೊಂಡು ಬಾ.”He told the servant, “Go to the other bank and find out who they are.”
23ಸೇವಕನು ಹೊಳೆದಾಟಿ ಆಚೆಯ ತೀರವನ್ನು ಸೇರಿ, ಆ ಜನರ ಗುಂಪಿನ ಬಳಿ ಹೋಗಿ ಮಾತನಾಡಿಸಿ ಬಂದು ರಾಜನಿಗೆ ಹೇಳಿದನು - “ಅವರು ವೇಷಗಾರರಂತೆ.”The servant crossed the river, approached the group and spoke to them; then he returned and told the king, “They are performers, it seems.”
24“ಅವರ ಊರು ಯಾವುದಂತೆ ?” ರಾಜ ಕೇಳಿದನು.“Which town are they from?” asked the king.
25“ಅದನ್ನು ಕೇಳಲಿಲ್ಲ ದೊರೆಗಳೇ, ಓಡುತ್ತ ಹೋಗಿ ಕೇಳಿಕೊಂಡು ಬರುವೆ” ಎಂದವನೇ ಅತ್ತ ಓಡಿದನು ಸೇವಕ.“I did not ask that, Your Majesty. I will run over and ask,” said the servant, and he ran off.
26ಮರಳಿ ಬಂದ ರಾಜನಿಗೆ ತಿಳಿಸಿದನು - “ಅವರು ಶ್ರೀಶೈಲ ಕಡೆಯವರಂತೆ.”On returning, he informed the king, “They are from the Srisailam region.”
27“ಹೀಗೋ ? ಇಲ್ಲಿ ಇನ್ನೂ ಎಷ್ಟು ದಿವಸ ಇರುವರಂತೆ ?” ರಾಜನ ಪ್ರಶ್ನೆ.“Is that so? How many more days will they be here?” asked the king.
28ಅದನ್ನು ಕೇಳುವದಕ್ಕೆ ಸೇವಕನು ಮತ್ತೆ ಹೊಳೆದಾಟಿದನು.The servant crossed the river again to ask that.
29ಇನ್ನೂ ನಾಲ್ಕಾರುದಿನ ಇಲ್ಲಿಯೇ ಇರುವರಂಬ ಸಮಾಚಾರ ತಂದನು.He brought back the news that they would stay there a few more days.
30“ನಮ್ಮ ಊರಿಗೆ ಬರುವರೇ ?” ಮತ್ತೊಂದು ಪ್ರಶ್ನೆ ರಾಜನದು.“Will they come to our town?” was the king’s next question.
31ಅದನ್ನು ತಿಳಿಯಲು ಸೇವಕನು ಹೋಗಿ ಬಂದನು.The servant went and returned to find that out.
32“ರಾಜನ ಅಪ್ಪಣೆಯಾದರೆ ಬರುವರಂತೆ” ಎಂದು ಸೇವಕನು ಬಿನ್ನಯಿಸಿದನು.“They say they will come if the king commands it,” the servant reported.
33“ಅವರು ಯಾವ ಸೋಗು ಹಾಕುತ್ತಾರೆ ? ಅವರು ಅಪೇಕ್ಷಿಸುವ ಪ್ರತಿಫಲ ಎಂಥದು ? ನಮ್ಮ ರಾಜಧಾನಿಯಲ್ಲಿಯೇ ಅವರು ನೆಲಸಬೇಕಾದರೆ ನಾವು ಯಾವ ಸೌಕರ್ಯ ಒದಗಿಸಬೇಕು ?” - ಮೊದಲಾದ ಸಂಗತಿಗಳನ್ನು ತಿಳಕೊಳ್ಳುವ ಸಲುವಾಗಿ ಸೇವಕನು ಹಲವು ಸಾರೆ ಓಡಾಡಬೇಕಾಯಿತು.“What roles do they perform? What payment do they expect? What facilities must we provide if they settle in our capital?” To find out these and other details, the servant had to run back and forth many times.
34ಆತನು ದಣಿದುಹೋದನೇ ಹೊರತು ರಾಜನಿಗೆ ಬೇಕಾದ ಸಂಪೂರ್ಣ ಮಾಹಿತಿ ತರಲಿಲ್ಲ.He became exhausted but still did not bring all the information the king needed.
35ಪ್ರಧಾನಿಯನ್ನು ಕರೆಯಿಸಿ ರಾಜನು ಹೇಳಿದನು - “ಹೊಳೆಯಾಚೆಗೆ ಕಾಣಿಸುವ ಗುಂಪು ಏತಕ್ಕಾಗಿ ನೆರೆದಿದೆ ? ಅವರಾರು ? ಅವರ ಉದ್ದೇಶವೇನು, ತಿಳಕೊಂಡು ಬರಬೇಕು.”The king summoned the minister and said, “Why has that group gathered across the river? Who are they? Find out what their purpose is.”
36“ಆಗಲಿ ದೊರೆಗಳೇ” ಎಂದು ವಂದಿಸಿ ಪ್ರಧಾನಿಯು ಹೊಳೆಯಾಚೆಗಿನ ತೀರಕ್ಕೆ ತೆರಳಿದನು.“Certainly, Your Majesty,” said the minister with a bow, and he went to the opposite bank.
37ಒಂದೆರಡು ಗಳಿಗೆಯಲ್ಲಿ ಬಂದು ತಾನು ತಂದ ಸಮಾಚಾರವನ್ನೆಲ್ಲ ರಾಜನಿಗೆ ಬಿನ್ನಯಿಸಿದನು -He returned in a short while and reported all the news he had gathered to the king:
38“ಅವರು ಶ್ರೀಶೈಲಕಡೆಯವರು.“They are from the Srisailam region.
39ವೇಷಗಾರರು.They are performers.
40ಹೆಣ್ಣು ಗಂಡು ಕೂಡಿ ಹನ್ನೊಂದು ಜನರಿದ್ದಾರೆ.There are eleven of them, women and men together.
41ಈ ಊರಲ್ಲಿ ನಾಲ್ಕಾರು ದಿನವಿದ್ದು ಮುಂದಿನೂರಿಗೆ ಹೊರಡುವದರಲ್ಲಿದ್ದರು.They intended to stay in this town a few days and then move to the next.
42ನಮ್ಮೂರಿಗೆ ಬರಲು ತಿಳಿಸಿದ್ದೇನೆ.I have asked them to come to our town.
43ದಶಾವತಾರಗಳ ಸೋಗು ಹಾಕುವರಂತೆ.They say they perform the ten incarnations of Vishnu.
44ನಾಲ್ಕು ಕೂರಿಗೆ ಹೊಲ, ಹನ್ನೆರಡು ಅಂಕಣದ ಮನೆ ಕೊಟ್ಟರೆ, ನಮ್ಮೂರವರಾಗಿಯೇ ಉಳಿಯುತ್ತೇವೆಂದು ಹೇಳಿದರು.They said they would settle in our town if given a field of four koorige and a house of twelve ankana.
45ಅಪ್ಪಣೆಯಾದರೆ ಈಗಲೇ ಬಂದು ದೊರೆಗಳನ್ನು ಕಾಣುವರಂತೆ.With your permission, they will come and meet Your Majesty right away.
46ಪ್ರಧಾನಿಯು ಒದಗಿಸಿದ ಸಂಗತಿಗಳನ್ನು ಕೇಳಿಕೊಂಡ ಬಳಿಕ, ರಾಜನಿಗೆ ಹೆಚ್ಚು ತಿಳಕೊಳ್ಳುವ ಅಗತ್ಯವೇ ಉಳಿಯಲಿಲ್ಲ.After hearing the details the minister provided, the king had nothing more he needed to know.
47ಸೇವಕನನ್ನು ಕರೆದು ರಾಜನು ಹೇಳಿದನು -He called the servant and said:
48“ನೋಡಿದೆಯಾ ? ನೀನು ಹತ್ತೆಂಟು ಸಾರೆ ಎಡತಾಕಿ ಮಾಹಿತಿ ತಂದರೂ ಅಪೂರ್ಣವಾಗಿಯೇ ಉಳಿಯಿತು.“Do you see? You ran back and forth many times, but your information remained incomplete.
49ಪ್ರಧಾನಿಯು ಒಂದೇ ಸಾರೆ ಹೋಗಿ ಬಂದರೆ, ಯಾವ ಸಂಗತಿಯನ್ನೂ ಉಳಿಸಿಕೊಂಡು ಬರಲಿಲ್ಲ.The minister went just once and left no detail unasked.
50ಅದಕ್ಕಾಗಿಯೇ ಆತನ ಸಂಬಳ ಅಷ್ಟು, ನಿನ್ನ ಸಂಬಳ ಇಷ್ಟೇ.That is why his salary is so much and yours is this much.

Koorige and ankana are traditional measures used in the source for land and house space; they are retained rather than converted to a modern unit.

Section 3: Vocabulary

ಕೆಲವು ಪದಗಳನ್ನು ಮೂಲರೂಪದಲ್ಲಿ ನೀಡಲಾಗಿದೆ. Some words are shown in their base forms.

Kannada (ಕನ್ನಡ)TransliterationPart of SpeechEnglish Meaning
ರಾಜraajaNounking
ಪ್ರಧಾನಿpradhaaniNounminister
ಸೇವಕsevakaNounservant; attendant
ಸಂಬಳsambalaNounsalary; pay
ರೂಪಾಯಿroopaayiNounrupee
ಬೊಗಸೆbogaseNouncupped handful
ಶ್ರಮshramaNouneffort; toil
ಹಗುರುhaguruAdjectivelight
ಅಸಮಾಧಾನasamaadhaanaNoundissatisfaction
ಬೇಟೆbeteNounhunt
ಹೊಳೆholeNounriver; stream
ನೆರಳುneraluNounshade
ಗುಂಪುgumpuNoungroup
ಕುತೂಹಲkutoohalaNouncuriosity
ದಡdadaNounbank; shore
ವೇಷಗಾರರುveshagaararuNounperformers
ಸಮಾಚಾರsamaachaaraNounnews; information
ಅಪ್ಪಣೆappaneNouncommand; permission
ಪ್ರತಿಫಲpratiphalaNounpayment; reward
ಸೌಕರ್ಯsoukaryaNounfacility; convenience
ಸಂಪೂರ್ಣsampoornaAdjectivecomplete
ಮಾಹಿತಿmaahitiNouninformation
ಉದ್ದೇಶuddeshaNounpurpose
ಅಪೂರ್ಣapoornaAdjectiveincomplete

Source: “ಸೇವಕನ ಸಂಬಳವೇಕೆ ಕಡಿಮೆ ?” in ಉತ್ತರ ಕರ್ನಾಟಕದ ಜನಪದ ಕಥೆಗಳು, compiled by Simpi Linganna, Government of Karnataka, Department of Kannada and Culture, 2011, pp. 120–122. Edition rights: Government of Karnataka; CC BY-SA 3.0. Source wording and punctuation are preserved with line wrapping and page breaks removed. LangFastPro’s English translation, Roman reading aid and narrated adaptation are also CC BY-SA 3.0. Vocabulary notes and the independently generated illustration are separate learning material.

Related lessons