Two rivers start on the same mountain. One rushes ahead. The other takes its time, and the two meet again on the plain.
Section 1: Kannada Story
ಎರಡು ನದಿಗಳು — The Two Rivers

ಒಂದು ದೊಡ್ಡ ಬೆಟ್ಟದಲ್ಲಿ ಹತ್ತಿರ ಹತ್ತಿರ ಎರಡು ನದಿಗಳು ಹುಟ್ಟಿ ಹರಿಯಲಿಕ್ಕೆ ಮೊದಲಾದುವು.
ಒಂದು ನದಿಯು ಬಹಳ ಎತ್ತರವಾದ ಸ್ಥಳದಲ್ಲಿ ಹುಟ್ಟಿತಾದುದರಿಂದ ಗುಡ್ಡದಿಂದ ಗುಡ್ಡಕ್ಕೆ ಬಿದ್ದು, ಧಡಧಡನೆ ಹರಿಯುತಿದ್ದಿತು.ಇನ್ನೊಂದು ಸ್ವಲ್ಪ ಕೆಳಗಡೆ ಸಮನಾದ ಸ್ಥಳದಲ್ಲಿ ಹುಟ್ಟಿತಾದುದರಿಂದ ಅಲ್ಲಲ್ಲಿ ನಿಂತು ಮೆಲ್ಲಮೆಲ್ಲನೆ ಹರಿಯುತಿದ್ದಿತು.
ಸರಸರನೆ ಹರಿದು ಹೋಗುತ್ತಿದ್ದ ನದಿಯು, ಇನ್ನೊಂದನ್ನು ನೋಡಿ 'ಏನು ! ಸೋಮಾರಿಯಂತೆ ತೆವಳಿಕೊಂಡು ಮೆಲ್ಲಗೆ ಹೋಗುತಿದ್ದೀಯೆ ? ನನ್ನನ್ನು ನೋಡು ! ಇನ್ನು ಸ್ವಲ್ಪದೂರ ಹೀಗೆ ಹೋಗಿ ದೊಡ್ಡ ಹೊಳೆಯಾಗಿ ಹರಿದು, ಅನೇಕ ದೇಶಗಳಲ್ಲಿ ಪ್ರವಹಿಸಿ, ಕಾಲುವೆಗಳನ್ನು ಕೊಟ್ಟು ರೈತರಿಗೆ ಬೇಕಾದುದನ್ನೆಲ್ಲಾ ಬೆಳೆಯಲೂ ಸಹಾಯವಾಗಿ, ಅನೇಕ ಸಣ್ಣ ಸಣ್ಣ ನದಿಗಳೊಡನೆ ಕೂಡಿ ಸಮುದ್ರವನ್ನು ಸೇರುವೆನು ' ಎಂದು ಹರಿದು ಮುಂದೆ ಮುಂದೆ ಹೋಗುತಿದ್ದಿತು.
ಮೆಲ್ಲಗೆ ಹರಿಯುತಿದ್ದ ನದಿಯು ಯಾವ ಉತ್ತರವನ್ನು ಕೊಡದೆ ತನ್ನ ಪಾಡಿಗೆ ತಾನು ಮೆಲ್ಲನೆ ಹರಿದು ಬಯಲಿಗೆ ಬೀಳಲು, ಇತರ ಸಣ್ಣ ಸಣ್ಣ ನದಿಗಳು ಬಂದು ಇದರೊಡನೆ ಸೇರಿದುವು. ಆಗ ಇದು ದೊಡ್ಡ ಹೊಳೆಯಾಗಿ, ಜನರಿಗೆ ಬಹು ಉಪಯೋಗವಾಗಿ, ಗಂಭೀರವಾಗಿ ಹರಿಯುತಿದ್ದಿತು.
ಮೊದಲುಡಂಭವನ್ನು ಮಾಡಿಕೊಂಡು ಮುಂದಾಗಿ ಬಂದ ನದಿಯೂ ಸ್ವಲ್ಪದೂರದಲ್ಲಿಯೇ ಇದನ್ನು ಸೇರಿ, ಇದರ ಮೇಲೆ ಹೋಗುತಿದ್ದ ಹಡಗುಗಳನ್ನೂ ಇದಕ್ಕೆ ಕಟ್ಟಿದ್ದ ಅಣೆಕಟ್ಟು ಸೇತುಗಳನ್ನೂ ನೋಡಿ ನಾಚಿಕೊಂಡು ಈ ದೊಡ್ಡ ಹೊಳೆಯಲ್ಲಿಯೆ ಅಡಗಿಹೋಯಿತು.
Section 2: Kannada and English
| # | Kannada (ಕನ್ನಡ) | English Translation |
|---|---|---|
| 1 | ಒಂದು ದೊಡ್ಡ ಬೆಟ್ಟದಲ್ಲಿ ಹತ್ತಿರ ಹತ್ತಿರ ಎರಡು ನದಿಗಳು ಹುಟ್ಟಿ ಹರಿಯಲಿಕ್ಕೆ ಮೊದಲಾದುವು. | Two rivers sprang up close together on a large mountain and began to flow. |
| 2 | ಒಂದು ನದಿಯು ಬಹಳ ಎತ್ತರವಾದ ಸ್ಥಳದಲ್ಲಿ ಹುಟ್ಟಿತಾದುದರಿಂದ ಗುಡ್ಡದಿಂದ ಗುಡ್ಡಕ್ಕೆ ಬಿದ್ದು, ಧಡಧಡನೆ ಹರಿಯುತಿದ್ದಿತು.ಇನ್ನೊಂದು ಸ್ವಲ್ಪ ಕೆಳಗಡೆ ಸಮನಾದ ಸ್ಥಳದಲ್ಲಿ ಹುಟ್ಟಿತಾದುದರಿಂದ ಅಲ್ಲಲ್ಲಿ ನಿಂತು ಮೆಲ್ಲಮೆಲ್ಲನೆ ಹರಿಯುತಿದ್ದಿತು. | One began high up and thundered down from hill to hill. The other began a little farther down, on level ground, and flowed slowly, pausing here and there. |
| 3 | ಸರಸರನೆ ಹರಿದು ಹೋಗುತ್ತಿದ್ದ ನದಿಯು, ಇನ್ನೊಂದನ್ನು ನೋಡಿ 'ಏನು ! ಸೋಮಾರಿಯಂತೆ ತೆವಳಿಕೊಂಡು ಮೆಲ್ಲಗೆ ಹೋಗುತಿದ್ದೀಯೆ ? ನನ್ನನ್ನು ನೋಡು ! ಇನ್ನು ಸ್ವಲ್ಪದೂರ ಹೀಗೆ ಹೋಗಿ ದೊಡ್ಡ ಹೊಳೆಯಾಗಿ ಹರಿದು, ಅನೇಕ ದೇಶಗಳಲ್ಲಿ ಪ್ರವಹಿಸಿ, ಕಾಲುವೆಗಳನ್ನು ಕೊಟ್ಟು ರೈತರಿಗೆ ಬೇಕಾದುದನ್ನೆಲ್ಲಾ ಬೆಳೆಯಲೂ ಸಹಾಯವಾಗಿ, ಅನೇಕ ಸಣ್ಣ ಸಣ್ಣ ನದಿಗಳೊಡನೆ ಕೂಡಿ ಸಮುದ್ರವನ್ನು ಸೇರುವೆನು ' ಎಂದು ಹರಿದು ಮುಂದೆ ಮುಂದೆ ಹೋಗುತಿದ್ದಿತು. | The rushing river looked at the other. ‘What are you doing, creeping along like a lazybones? Look at me! I’ll go a little farther and become a great river. I’ll flow through many lands, feed canals and help farmers grow everything they need. Then I’ll join lots of little rivers and reach the sea.’ And on it rushed. |
| 4 | ಮೆಲ್ಲಗೆ ಹರಿಯುತಿದ್ದ ನದಿಯು ಯಾವ ಉತ್ತರವನ್ನು ಕೊಡದೆ ತನ್ನ ಪಾಡಿಗೆ ತಾನು ಮೆಲ್ಲನೆ ಹರಿದು ಬಯಲಿಗೆ ಬೀಳಲು, ಇತರ ಸಣ್ಣ ಸಣ್ಣ ನದಿಗಳು ಬಂದು ಇದರೊಡನೆ ಸೇರಿದುವು. ಆಗ ಇದು ದೊಡ್ಡ ಹೊಳೆಯಾಗಿ, ಜನರಿಗೆ ಬಹು ಉಪಯೋಗವಾಗಿ, ಗಂಭೀರವಾಗಿ ಹರಿಯುತಿದ್ದಿತು. | The slower river said nothing. It kept flowing quietly on its own until it reached the plain, where other little rivers joined it. It became a great river, flowing majestically and serving the people well. |
| 5 | ಮೊದಲುಡಂಭವನ್ನು ಮಾಡಿಕೊಂಡು ಮುಂದಾಗಿ ಬಂದ ನದಿಯೂ ಸ್ವಲ್ಪದೂರದಲ್ಲಿಯೇ ಇದನ್ನು ಸೇರಿ, ಇದರ ಮೇಲೆ ಹೋಗುತಿದ್ದ ಹಡಗುಗಳನ್ನೂ ಇದಕ್ಕೆ ಕಟ್ಟಿದ್ದ ಅಣೆಕಟ್ಟು ಸೇತುಗಳನ್ನೂ ನೋಡಿ ನಾಚಿಕೊಂಡು ಈ ದೊಡ್ಡ ಹೊಳೆಯಲ್ಲಿಯೆ ಅಡಗಿಹೋಯಿತು. | The river that had boasted and rushed ahead joined it a little way farther on. Seeing the boats on the river and the dams and bridges built for it, it was ashamed and slipped into the larger river. |
Section 3: Vocabulary
| Kannada (ಕನ್ನಡ) | Transliteration | Part of Speech | English Meaning |
|---|---|---|---|
| ಬೆಟ್ಟ | betta | noun | mountain |
| ನದಿ | nadi | noun | river |
| ಧಡಧಡನೆ | dhadadhadane | adverb | with a loud, repeated thundering sound |
| ಮೆಲ್ಲಮೆಲ್ಲನೆ | mellamellane | adverb | very slowly |
| ಸೋಮಾರಿ | somaari | noun | lazy person |
| ಕಾಲುವೆ | kaaluve | noun | canal |
| ರೈತ | raita | noun | farmer |
| ಸಮುದ್ರ | samudra | noun | sea |
| ಬಯಲು | bayalu | noun | open plain |
| ಹಡಗು | hadagu | noun | boat; ship |
| ಅಣೆಕಟ್ಟು | anekattu | noun | dam |
| ನಾಚಿಕೊಂಡು | naachikondu | verb form | feeling ashamed |
Source: ಎರಡು ನದಿಗಳು by B. Subba Rao, story 12 in Kathavali, Part 1 (1918 edition). The historical edition is marked as public domain. The Kannada Wikisource transcription and the English translation, English-letter reading aid and narration derived from it are available under CC BY-SA 4.0. LangFastPro added the translation, reading aid and learning material.




